ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕೊಡಗಿನ ಅಬ್ದುಲ್‌ ರೆಹಮಾನ್‌ ಎನ್‌ಐಎ ವಶಕ್ಕೆ

Share this post :

coorg buzz

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೋಮವಾರಪೇಟೆಯ ಅಬ್ದುಲ್‌ ರೆಹಮಾನ್‌ನನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪ ಸೋಮವಾರಪೇಟೆಯ ಕಲ್ಕಂದೂರಿನ ಅಬ್ದುಲ್‌ ರೆಹಮಾನ್‌ ಮೇಲೆ ಇತ್ತು. ಪ್ರರಕಣದ ನಂತರ ಈತ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಮಾಹಿತಿ ನೀಡಿದವರಿಗೆ ನಗದು ಬಹುಮಾನೂ ಘೋಷಣೆಯಾಗಿತ್ತು. ಆದರೆ ಈತ ಮಾತ್ರ ಸಿಕ್ಕಿರಲಿಲ್ಲ. ಇಂದು ಕೇರಳದ ವಿಮಾನದ ನಿಲ್ದಾನದಲ್ಲಿ ಈತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ನಿಷೇಧಿತ ಸಂಘಟನೆ ಪಿಎಫ್‌ಐನ ಪ್ರಮುಖ ಜವಾಬ್ದಾರಿಯಲ್ಲಿದ್ದ ಈತ ಪ್ರವೀಣ್ ನೆಟ್ಟಾರು ಹತ್ಯೆ ಈತ ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.