66/11 ಕೆ.ವಿ ಮಡಿಕೇರಿ ವಿದ್ಯುತ್ ಉಪಕೇಂದ್ರದಲ್ಲಿ ನಾಳೆ ಬೆಳಗ್ಗೆ 10.00 ರಿಂದ 5.00 ಗಂಟೆಯವರಗೆ ನಿರ್ವಹಣಾ ಕಾಮಗಾರಿ ನಡೆಯುವ ಕಾರಣದಿಂದ ಮಡಿಕೇರಿ ನಗರ, ರಾಜಾಸೀಟ್ ರಸ್ತೆ, ಗದ್ದಿಗೆ, ಕೋಟೆ, ಕುಂಡಮೇಸ್ತ್ರಿ, ಒಂಕಾರೇಶ್ವರ, ಜೆ.ಟಿ ರಸ್ತೆ, ಕೆ.ಎಸ್.ಆರ್.ಟಿ.ಸಿ, ಮೇಕೇರಿ, ಭಾಗಮಂಡಲ, ಬೊಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬಟ್ಟಗೇರಿ, ಕೆ.ಬಾಡಗ, ಬೆಟ್ಟಗೆರಿ, ಚೆಟ್ಟಿಮಾಣಿ, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.



