Power Cut: ನಾಳೆ ಕೊಡಗಿನ ಹಲವೆಡೆ ವಿದ್ಯುತ್ ಕಡಿತ: ಯಾವೆಲ್ಲ ಪ್ರದೇಶಗಳಲ್ಲಿ?

Power Cut

Share this post :

220/66/11 ಕೆ.ವಿ ಕುಶಾಲನಗರ, 66/11 ಕೆ.ವಿ ಸುಂಟಿಕೊಪ್ಪ, 33/11 ಕೆವಿ ಸೋಮವಾರಪೇಟೆ ಹಾಗೂ 66/11 ಕೆವಿ ಮಾದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಳ್ಳಲಾಗುದರಿಂದ ಆಗಸ್ಟ್, 20 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ, ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕಾನ್‍ಬೈಲು, ಅಂದಗೋವೆ, ನಾಕೂರು, ಹಾದ್ರೆ ಹೊರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಅಭ್ಯತ್‍ಮಂಗಲ, ನಾಕೂರು ಶಿರಂಗಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹಾಗೆಯೇ 66/11 ಕೆ.ವಿ ಆಲೂರು ಸಿದ್ದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರ ಹಾಗೂ 66/33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ನಗರೂರು, ದುದ್ದಗಲ್ಲು, ಗಾಧಿನಗರ, ಬಸವೇಶ್ವರ ರಸ್ತೆ, ಐಗೂರು, ಸಜ್ಜಳ್ಳಿ, ಹೊಸತೋಟ, ಗರಗಂದೂರು, ಕಾಜೂರು, ಗಿರಿವ್ಯಾಲಿ, ಅಬ್ಬೂರು ಕಟ್ಟೆ, ತಣ್ಣೀರು ಹಳ್ಳ, ನೆಗಳ್ಳಿ-ಕರ್ಕಳ್ಳಿ, ನೇರುಗಳಲೆ, ಒಳಗುಂದ, ಚೋರಿಕಲ್ಲು, ಯಲಕನೂರು, ಹೊಸಳ್ಳಿ, ಕೂಡುರಸ್ತೆ, ಮಾಲಂಬಿ, ಹೊಸಗುತ್ತಿ, ಗಾರೆಗಟ್ಟ, ಬಡುಬನಹಳ್ಳಿ, ಹೊನ್ನೆಕೊಪ್ಪಲು, ಗೋಣಿಮರೂರು, ನಾಗಬಾಲ, ಉಂಜಿಗನಹಳ್ಳಿ, ಬಾಣವಾರ, ಕಣಗಾಲು, ಆಲೂರು ಸಿದ್ದಾಪುರ, ಕಂತೆಬಸವನಹಳ್ಳಿ, ಸೀಗೆಮರೂರು, ಪಳ್ಳಗೋಟು, ದೊಡ್ಡಮಳ್ತೆ, ಹನಕೋಡು, ಗೆಜ್ಜೆಹನಕೋಡು, ಚಿಕ್ಕತೋಳೂರು, ಕೂಗೆಕೋಡಿ, ಯಡೂರು, ಕಿರಗಂದೂರು, ತಾಕೇರಿ, ಕೂತಿ, ಹೊಸಬೀಡು, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹರಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

coorg buzz
coorg buzz