ಮಡಿಕೇರಿ : ನಗರದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಾಹನ ದಟ್ಟಣೆ ಕೂಡಾ ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು. ಹೀಗಾಗಿ ಆಗಸ್ಟ್ 17ರಂದು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆ ಮಧ್ಯೆ ನಿರ್ಮಾಣವಾಗಿದ್ದ ಗುಂಡಿಗಳಿಗೆ ಕಲ್ಲು ಹಾಕಿ ಮುಚ್ಚಿ ವಾಹನ ಸಂಚಾರ ಸುಗಮವಾಗಲು ಶ್ರಮಿಸಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದನ್ನು ಕಂಡ ಜನ ನಗರಸಭೆ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು.
ಇದಾದ ಎರಡೇ ದಿನದಲ್ಲಿ ನಗರಸಭೆ ಅಲರ್ಟ್ ಆಗಿದೆ. ಎಚ್ಚೆತ್ತಿರುವ ನಗರಸಭೆ ಎಂ ಸ್ಯಾಂಡ್, ಜಲ್ಲಿ ಬಳಸಿ ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.



