ಮಡಿಕೇರಿ: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳ ಪೌಷ್ಠಿಕ ಪುನಃಚೇತನ ಕೇಂದ್ರ ನಡೆಸಲಾಗುತ್ತಿದೆ. ಇದು ಸರ್ಕಾರದ ಯೋಜನೆಯಾಗಿದೆ. ಪೌಷ್ಟಿಕ ವಿಭಾಗವು ರಾಜ್ಯದ ಅನುದಾನದ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಡೆಸಲಾಗುತ್ತಿದೆ. 0-6 ವರ್ಷದೊಳಗಿನ, ಅಪೌಷ್ಟಿಕತೆ ಮತ್ತು ಸಾಧಾರಣ ಅಪೌಷ್ಟಿಕತೆಯುಳ್ಳ ಅಪೌಷ್ಟಿಕ ಮಕ್ಕಳನ್ನು ಇಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.
ಮಾನದಂಡಗಳು: ವಿಶ್ವ ಆರೋಗ್ಯ ಸಂಸ್ಥೆಯ ಬೆಳವಣಿಗೆ ನಕ್ಷೆಯ ಪ್ರಕಾರ ಎತ್ತರಕ್ಕೆ ತಕ್ಕ ತೂಕ ಕಡಿಮೆ ಇರುವ ಮಕ್ಕಳು ತೋಳಿನ ಸುತ್ತಳತೆ (11.5 ಸೆಂ.ಮೀ.) ಒಳಗೆ (ತೀವ್ರ ಪೌಷ್ಟಿಕತೆ) ತೋಳಿನ ಸುತ್ತಳತೆ 11.5 -12.5 ಸೆಂ.ಮೀ. ಒಳಗೆ (ಸಾಧಾರಣ ಅಪೌಷ್ಟಿಕತೆ) ಮಕ್ಕಳು ಪಾದದಲ್ಲಿ ಊತ (ಪೀಡಲ್ ಎಡಿಮಾ), ಇದ್ದಾಗ, 0-6 ವರ್ಷದೊಳಗಿನ ಅಪೌಷ್ಟಿಕತೆಯೊಂದಿಗೆ ರಕ್ತಹೀನತೆ ಉಳ್ಳ ಮಕ್ಕಳನ್ನು ಮತ್ತು ಸಿವಿಯರ್ ವೇಸ್ಟಿಂಗ್ (ಶರೀರದಲ್ಲಿ ಮೂಳೆಗಳು ಎದ್ದು ಕಾಣುವುದು) ಇಂತಹ ಮಕ್ಕಳನ್ನು ದಾಖಲಿಸಲಾಗುವುದು.
ಸೌಲಭ್ಯಗಳು: ಪೌಷ್ಟಿಕ ಪುನಃಚೇತನ ಕೇಂದ್ರದಲ್ಲಿ ದಾಖಲಾದ ಮಕ್ಕಳಿಗೆ 14 ದಿನಗಳವರೆಗೆ ಉಚಿತ ಪೌಷ್ಟಿಕ ಆಹಾರ ಮತ್ತು ಔಷಧೋಪಚಾರ, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಆರೋಗ್ಯ ತಪಾಸಣೆಗಳು ಉಚಿತ (ಎಂಆರ್‍ಐ, ಸಿಟಿ ಸ್ಕ್ಯಾನಿಂಗ್ ಎಕ್ಸರೇ ರಕ್ತಪರಿಕ್ಷೆ ಟಿಬಿ ಪರೀಕ್ಷೆ) ಇತ್ಯಾದಿಗಳು.
ತಾಯಂದಿರು ಅಥವಾ ಪೆÇೀಷಕರಿಗೆ ಉಚಿತ ಆಹಾರ ಪೂರೈಕೆ, ದಾಖಲಾದ ದಿನದಿಂದ 14 ದಿನಗಳವರೆಗೆ ದಿನಭತ್ಯೆ ದಿನಕ್ಕೆ 370 ರೂಪಾಯಿಗಳು, ಆರ್ಥಿಕ ಸೌಲಭ್ಯ, ಮಗುವಿಗೆ ಆಸ್ಪತ್ರೆಯಲ್ಲಿ ಖರ್ಚು ಮಾಡುವುದು ದಿನವೊಂದಕ್ಕೆ ಒಂದು ಮಗುವಿಗೆ ಔಷಧಿಗೆ 125 ಆಹಾರಕ್ಕೆ, 125/- ಪೆÇೀಷಕರ ಆಹಾರಕ್ಕೆ, 100 ರೂ.
ಲಭ್ಯತೆಯ ಔಷಧಿಗಳು: ಕ್ಯಾಲ್ಸಿಯಂ ಸಿರಪ್, ಮಲ್ಟಿ ವಿಟಮಿನ್ ಸಿರಪ್, ಪೆÇಟ್ಯಾಶಿಯಂ ಕ್ಲೋರೈಡ್ ಸಿರಾಫ್, ಮೆಗ್ನೇಷಿಯಂ ಸಲ್ಫೇಟ್ ಇಂಜೆಕ್ಷನ್, ಜಿಂಕ್ ಸಿರಾಫ್, ರಕ್ತಹೀನತೆ ಇದ್ದಲ್ಲಿ ಟೊನೊ ಫೆರನ್ ಸಿರಪ್, ವಿಟಮಿನ್ ಡಿ3 ಡ್ರಾಪ್ಸ್ (1 ವರ್ಷದೊಳಗಿನ ಮಕ್ಕಳಿಗೆ) ವಿಟಮಿನ್ ಡಿ3 ಕ್ಯಾಪ್ಸುಲ್ಸ್ ( 1-6 ವರ್ಷದೊಳಗಿನ ಮಕ್ಕಳಿಗೆ) ಮೂಳೆಗಳ ಬೆಳವಣಿಗೆಯ ಸಾಂದ್ರತೆ ಕಡಿಮೆ ಇರುವ ಮಕ್ಕಳಿಗೆ, ತಜ್ಞ ವೈದ್ಯರ ಸಲಹೆ ಮೇರೆಗೆ, ವಿಟಮಿನ್ ಡಿ3 ಇಂಜೆಕ್ಷನ್ ಕೊಡಲಾಗುವುದು ವಿಟಮಿನ್ ಎ ಅನ್ನಾಂಗ ದ್ರಾವಣ, ಜಂತುಹುಳು ನಿವಾರಕ ಔಷಧಿಗಳು, ಆರೋಗ್ಯದಲ್ಲಿ ಬೇರೆ ಯಾವುದಾದರೂ ಕಾಯಿಲೆಗಳಿದ್ದಲ್ಲಿ, ಆಂಟಿಬಯೋಟಿಕ್ಸ್ ಕೊಡಲಾಗುವುದು, ಈ ಎಲ್ಲಾ ಔಷಧಿಗಳು ಮಕ್ಕಳ ತಜ್ಞ ವೈದ್ಯರ ಮಾರ್ಗದರ್ಶನದ ಮೇರೆಗೆ ಕೊಡಲಾಗುವುದು.
ನಗು ಮಗು ವಾಹನದ ಸೌಲಭ್ಯ: ಅಪೌಷ್ಟಿಕ ಮಗು ಪುನಶ್ಚೇತನಗೊಂಡು, ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ನಗು ಮಗು ವಾಹನದಲ್ಲಿ ಉಚಿತವಾಗಿ ಮನೆಯವರೆಗೂ ಕಳುಹಿಸಿಕೊಡಲಾಗುತ್ತದೆ.
ಅನುಸರಣ ಬೇಟಿ: ಮಗು ಪೌಷ್ಟಿಕ ಪುನಶ್ಚೇತನ ಕೇಂದ್ರದಿಂದ ಬಿಡುಗಡೆ ಹೊಂದಿ 1,2,4,8, ವಾರಗಳಲ್ಲಿ ಅನುಸರಣ ಭೇಟಿ ಮಾಡಲಾಗುವುದು. ಸಮನ್ವಯ ಆಧ್ಯತೆಗಳು ಆರೋಗ್ಯ ತಪಾಸಣೆ ಪೌಷ್ಟಿಕಾಂಶದ ಮೌಲ್ಯಮಾಪನದ ಸಮಯದಲ್ಲಿ, ಫಲಾನುಭವಿಗಳು ಅಂಗನವಾಡಿ ಮತ್ತು ಶಾಲೆಗಳಲ್ಲಿ ಹಾಜರಿರಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ತೂಕ ಹೆಚ್ಚುವವರೆಗೂ ದಾಖಲಿಸುವುದು. ಒಟ್ಟಾರೆ ಅಪೌಷ್ಟಿಕತೆಯಿಂದ ಉಂಟಾಗುವ ಮಕ್ಕಳ ಮರಣವನ್ನು ತಡೆಗಟ್ಟುವುದು, ರಕ್ತಹೀನತೆ ತಡೆಯುವುದು, ಸ್ವಸ್ಥ ಮಕ್ಕಳು ಸಶಕ್ತ ದೇಶವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಪುರುμÉೂೀತ್ತಮ್ ಅವರು ಪೋಷಕರಿಗೆ ಸಲಹೆ ನೀಡಿರುತ್ತಾರೆ.



