ಕೊಡಗು ಮೂಲದ ಕ್ಯಾಪ್ಟನ್ ಮಾಳೇಟಿರ ನಿತಿನ್ ಕಾರ್ಯಪ್ಪ ಭಾರತೀಯ ನೌಕಾಪಡೆಯ (Indian Navy) ಕಮಾಡಿಂಗ್ ಆಫೀಸರ್ ಆಗಿ ಕಲ್ಕತ್ತದ ಐಎನ್ಎಸ್ ನಲ್ಲಿ ನೇಮಕಗೊಂಡಿದ್ದಾರೆ. ಕ್ಯಾಪ್ಟನ್ ನಿತಿನ್ ಕಾರ್ಯಪ್ಪ ಮೈಸೂರಿನ ಸೇಂಟ್ ಜೋಸೆಫ್ ಶಾಲಾ ವಿದ್ಯಾಭ್ಯಾಸದ ನಂತರ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್ ಡೆಹರಾಡೂನ್ ನಲ್ಲಿ ತರಬೇತಿ ಹೊಂದಿ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡರು.
ಈ ಹಿಂದೆ ಐಎನ್ಎಸ್ ಅಜಯ್, ಐಎನ್ಎಸ್ ಕಡ್ಮಟ್ ನಲ್ಲಿ ಕಮಾಂಡರ್ ಆಗಿ ಸೇವಿಸಲಿಸಿದ್ದರು. ಇಸ್ಲಾಂಮಬಾದ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸಲಹೆಗಾರರಾಗಿ ಕೂಡ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ರಾಷ್ಟ್ರೀಯ ಓಟಗಾರ್ತಿ ರೋಹಿಣಿ ಇತ್ತೀಚೆಗೆ ನಡೆದ ಟಾಟಾ ಮುಂಬೈ ಮೆರಥಾನ್ ನಲ್ಲಿ ಭಾಗವಹಿಸಿ ಪೂರ್ಣವಾಗಿ ಅಂತಿಮಗೊಳಿಸಿದ್ದರು. ಇವರು ಮೈಸೂರಿನಲ್ಲಿ ನೆಲೆಸಿರುವ ಮಾಳೇಟಿರ ಗಣೇಶ್ ಬೋಪಣ್ಣ ಹಾಗೂ ದಿವಂಗತ ಕಾವೇರಿ ಬೋಪಣ್ಣ ರವರ ಪುತ್ರರಾಗಿದ್ದಾರೆ. ಇವರ ಕಿರಿಯ ಸಹೋದರ ನಯನ್ ಚಂಗಪ್ಪ ಮುಖ್ಯ ಮೆರಾಯಿನ್ ಇಂಜಿನಿಯರ್ ಆಗಿ ನ್ಯೂಜಿಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.