ಕೊಡಗು ಜಿಲ್ಲಾ ತೀಯಾನ್ ಮಹಾಸಭಾ ಸಮಿತಿಗೆ ನೂತನ ಸಾರಥಿಗಳ ಆಯ್ಕೆ

Thiyan Mahasabha

Share this post :

ಮಡಿಕೇರಿ: ಇಲ್ಲಿನ ರಾಜ ದರ್ಶನ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ತೀಯಾನ್ ಮಹಾಸಭಾ ಜಿಲ್ಲಾ ಸಮಿತಿಯ ಪ್ರಮುಖ ಸಭೆಯಲ್ಲಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಕಿರಗಂದೂರಿನ ಎ.ಎನ್. ಪದ್ಮನಾಭ ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್.ಆರ್. ಅಶೋಕ್ ಕುಮಾರ್ (ಉಪಾಧ್ಯಕ್ಷ), ಶ್ರೀಮತಿ ಜ್ಯೋತಿ ಅರುಣ್ (ಪ್ರಧಾನ ಕಾರ್ಯದರ್ಶಿ), ಎಂ.ಕೆ. ಮೋಹನ್ (ಖಜಾಂಜಿ) ಹಾಗೂ ಎನ್.ಸಿ. ಸುದರ್ಶನ್ (ಸಂಘಟನಾ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಯಿತು. ಸಂಘಟನೆಯ ಗೌರವ ಸಲಹೆಗಾರರಾಗಿ ಲೆಕ್ಕ ಪರಿಶೋಧಕ ಟಿ.ಕೆ. ಸುಧೀರ್ ಹಾಗೂ ಕಾನೂನು ಸಲಹೆಗಾರರಾಗಿ ಕೆ.ವಿ. ಸುನಿಲ್ ಅವರನ್ನು ಸಭೆ ನೇಮಿಸಿತು.

coorg buzz
coorg buzz