ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಜ್ಯೋತಿಶ್

Share this post :

coorg buzz

ಮಡಿಕೇರಿ : ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹೆಚ್. ಜ್ಯೋತಿಶ್ (H.Jyothish), ರಾಜ್ಯ ಕಾರ್ಯದರ್ಶಿ ಕುಮಾರ್(Kumar ) ಶನಿವಾರ ಜೀವನದಿ ಕಾವೇರಿಯ ಉಗಮ  ಸ್ಥಳ ತಲಕಾವೇರಿಗೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ವಿರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗೌರೀಶ್ ರೈ(Gowrish rai), ಅನಂತ್ ಭಾಗಮಂಡಲ, ಜಸ್ವಂತ್ ಭಾಗಮಂಡಲ, DCC ಸದಸ್ಯ ಸುನೀಲ್ ಪತ್ರವೊ, ಮೈಸೂರು ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಅಬ್ರಾರ್, ನಗರ ಉಪಾಧ್ಯಕ್ಷ ವಿನೋದ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕನ್, ದಿಲೀಪ್, ಹೇಮಂತ್ ಕುಮಾರ್, ಪವನ್ ಉಪಸ್ಥಿತರಿದ್ದರು.