ಮೈಸೂರು : ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ದಸರಾಗೆ ಚಾಲನೆ ನೀಡಿದರು.
ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿದ ಬಾನು ಮುಷ್ತಾಕ್ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳಾರತಿ ಸ್ವೀಕರಿಸಿದರು. ಇದರೊಂದಿಗೆ ದೇವಿಯ ಸೀರೆಯನ್ನೂ ಪಡೆದುಕೊಂಡರು. ಅರ್ಚಕರು ಹೂವಿನ ಹಾರ ನೀಡಿ ಗೌರವಿಸಿದರು. ಕೆಲ ಕ್ಷಣ ಅವರು ಭಾವುಕರಾದಂತೆ ಕಂಡುಬಂದರು.
ಬಾನು ಮುಷ್ತಾಕ್ ದಸರಾ ಉದ್ಘಾಟಿಸುವದಕ್ಕೆ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ದೇವಿಜೆ ಪೂಜೆ ಮಾಡುತ್ತಾರಾ? ಆರತಿ ಸ್ವೀಕರಿಸುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಅನೇಕರು ಎತ್ತಿದ್ದರು. ಅದಕ್ಕೆಲ್ಲ ಇಂದು ಬಾನು ಮುಷ್ತಾಕ್ ಉತ್ತರಿಸಿದ್ದಾರೆ.



