ವೀರಾಜಪೇಟೆ : ಎಸ್‌ಎಸ್‌ಎಫ್ ಜಿಲ್ಲಾ ಘಟಕ ವತಿಯಿಂದ ಕಡಂಗದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ನಡೆಯಿತು. ಜೂನಿಯರ್ ವಿಭಾಗದ ಕನ್ನಡ ಕಥೆ ಹೇಳುವ ಸ್ಪರ್ಧೆಯಲ್ಲಿ ಕಲ್ಲುಬಾಣೆಯ ಮುಹಮ್ಮದ್ ಅಶ್ಹದ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತ ಕಲ್ಲುಬಾಣೆಯ ಹ್ಯಾರಿಸ್, ಅಮೀನ ದಂಪತಿಯ ಪುತ್ರ. ರಾಜ್ಯಮಟ್ಟದ ಸ್ಪರ್ಧೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ತುರ್ಕಳಿಕೆಯಲ್ಲಿ ಸೆ.26ರಿಂದ 28ರವರೆಗೆ ನಡೆಯಲಿದೆ.



