ಮುದ್ದಂಡ ಹಾಕಿ ನಮ್ಮೆ : ಮಹಿಳಾ ಹಾಕಿಯಲ್ಲಿ ಚೊಚ್ಚಲ ಚಾಂಪಿಯನ್‌ ಆದ ಕಂಬೀರಂಡ ಚಾಂಪಿಯನ್

Muddanda Hockey

Share this post :

ಮಡಿಕೇರಿ : ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಮುದ್ದಂಡ (Muddanda) ಕಪ್ ಹಾಕಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನ ಸಂಖ್ಯೆ ೨ರಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರAಡ ತಂಡ ಜಯಭೇರಿ ಬಾರಿಸಿತು.

ಕಂಬೀರಂಡ ಪರ ಪೊನ್ನಮ್ಮ ೨ ಗೋಲು ದಾಖಲಿಸಿದರು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಪಾರ್ವತಿ ತಲಾ ೧ ಗೋಲು ಬಾರಿಸಿದರು. ಕೇಚೆಟ್ಟಿರ ಪಾರ್ವತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಏ.೨೧ ರಿಂದ ನಡೆದ ಮಹಿಳೆಯರ ೫ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 56 ಕೊಡವ ಮಹಿಳಾ ತಂಡಗಳು ಪಾಲ್ಗೊಂಡಿದ್ದವು.