ಜು.04ಕ್ಕೆ ಸಂಸದ ಯದುವೀರ್‌ ಕೊಡಗು ಪ್ರವಾಸ – ವಿರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ…

Share this post :

coorg buzz

 

ವೀರಾಜಪೇಟೆ : ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಒಡೆಯರ್‌ ಜುಲೈ ೦೪ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಅಂದು ವೀರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬಿರುನಾಣಿ, 11 ಗಂಟೆಗೆ ಟಿ.ಶೆಟ್ಟಿರಿ, 12 ಗಂಟೆಗೆ ಶ್ರೀಮಂಗಲ ಶಕ್ತಿ ಕೇಂದ್ರ, ಮಧ್ಯಾಹ್ನ 1 ಗಂಟೆಗೆ ಕಾನೂರು, 2 ಗಂಟೆಗೆ ಪೊನ್ನಂಪೇಟೆ, ಬಲ್ಯಮುಂಡ್ಡೂರು, ಕಿರುಗೂರು ಶಕ್ತಿ ಕೇಂದ್ರ (ಸ್ಥಳ :ಪೊನ್ನಂಪೇಟೆ), 3 ಗಂಟೆಗೆ ಗೋಣಿಕೊಪ್ಪ,ಅರುವತೊಕ್ಕಲು, ಹಾತೂರು ಶಕ್ತಿ ಕೇಂದ್ರ (ಸ್ಥಳ: ಗೋಣಿಕೊಪ್ಪ), 5 ಗಂಟೆಗೆ ಬಿ.ಶೆಟ್ಟಿಗೇರಿ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಈ ಸಂದರ್ಭ ಜಿಲ್ಲಾ ಬಿಜೆಪಿ ಮುಖಂಡರು ಕೂಡಾ ಭಾಗವಹಿಸಲಿದ್ದಾರೆಂದು ಭಾರತೀಯ ಜನತಾ ಪಾರ್ಟಿ ವಿರಾಜಪೇಟೆ ಮಂಡಲ ಪ್ರಕಟಣೆ ತಿಳಿಸಿದೆ.