ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಕೊಡಗಿನ ಯುವ ಸಾಹಿತಿ ಮೂಕೊಂಡ ನಿತಿನ್‌ ಕುಶಾಲಪ್ಪ..!

Share this post :

ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ 2025ನೇ ಸಾಲಿನ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಕೊಡಗಿನ ಮೂಕೊಂಡ ನಿತಿನ್‌ ಕುಶಾಲಪ್ಪ ಸೇರಿದಂತೆ ಮೂವರು ಕನ್ನಡಿಗರಿಗೆ ಪ್ರಶಸ್ತಿ ಲಭಿಸಿದೆ.
ಮೂಕೊಂಡ ನಿತಿನ್‌ ಅವರ ‘ದಕ್ಷಿಣ್ ಸೌಥ್ ಇಂಡಿಯನ್ ಮಿಥ್ಸ್‌ & ಫೇಬಲ್ಸ್ ರೀಟೋಲ್ಡ್’ ಕಥಾಸಂಕಲನಕ್ಕೆ ‘ಇಂಗ್ಲಿಷ್’ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಯುವ ಪುರಸ್ಕಾರ ಲಭಿಸಿದೆ. ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ ಸಣ್ಣಕಥೆಗಳ ಸಂಕಲನಕ್ಕೆ ಕನ್ನಡ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ಸಿಕ್ಕಿದೆ. ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ದಿನಾಂಕ ಇನ್ನಷ್ಟೇ ನಿಗಧಿಯಾಗಬೇಕಿದೆ. ದೇಶದ ವಿವಿಧ ಭಾಷೆಗಳ ಒಟ್ಟು 23 ಲೇಖಕರು ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

coorg buzz
coorg buzz