ಸಂಪಾಜೆ : ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಡಾವು ಬಳಿ ದುಗ್ಗಳ ಭಾಗದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಇತ್ತೀಚೆಗೆ ಉದ್ಘಾಟಿಸಿದರು. ಅದೇ ರೀತಿ ಬಂಟೋಡಿಯಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಗ್ರಾಮ ವ್ಯಾಪ್ತಿಯ ಮುಖಂಡರು, ಸಾರ್ವಜನಿಕರು ಈ ಸಂದರ್ಭ ಉಪಸ್ಥಿತರಿದ್ದರು.
