ಸರ್ಕಾರ ಡಿಜೆ ನಿಷೇಧ ಮಾಡಿಲ್ಲ ಎಂದ ಸಚಿವ ಶಿವರಾಜ ತಂಗಡಗಿ – ಆದ್ರೆ ಆಯೋಜಕರು ಈ ಬಗ್ಗೆ ಗಮನ ಹರಿಸದಿದ್ರೆ ಸಮಸ್ಯೆ ಆಗೋದು ನಿಶ್ಚಿತ..!

Share this post :

ಕೊಪ್ಪಳ : ಈ ಬಾರಿಯ ಗೌರಿ ಗಣೇಶ ಹಬ್ಬದಲ್ಲಿ ಡಿಜೆ ಬಳಕೆ ಸಂಬಂಧಿತವಾಗಿ ಆಯೋಜಕರಲ್ಲಿ ಗೊಂದಲ, ಆತಂಕ ಇದೆ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿನ ಶಿವರಾಜ ತಂಗಡಗಿ ಹೇಳಿಕೆ ಕೊಟ್ಟಿದ್ದು, ಸರ್ಕಾರ ಡಿಜೆ ನಿಷೇಧ ಮಾಡಿಲ್ಲ ಎಂದಿದ್ದಾರೆ.
ಗಣೇಶ ಹಬ್ಬದಲ್ಲಿ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುತ್ತದೆ. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸರ್ಕಾರ ಡಿಜೆ ನಿಷೇಧ ಮಾಡಿಲ್ಲ. ಡಿಜೆ ಬಳಕೆಗೆ ಕೋರ್ಟ್‌ ಮಾರ್ಗಸೂಚಿಯ ಪ್ರಕಾರ ಇಂತಿಷ್ಟು ಡೆಸಿಬಲ್‌ ಇರಬೇಕು ಎಂಬ ನಿಯಮವಿದೆ. ಆ ಪ್ರಕಾರ ನೋಡಿಕೊಳ್ಳಬೇಕು ಅಂತ ಅವರು ಹೇಳಿದ್ದಾರೆ.

coorg buzz
coorg buzz