ಧರಾಲಿಯಲ್ಲಿ ಭೀಕರ ಭೂಕುಸಿತ – 70ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ…

Share this post :

ಉತ್ತರಾಖಂಡ : ಉತ್ತರಾಖಂಡದ ಧರಾಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವವರ ರಕ್ಷಣೆಗೆ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಮಧ್ಯಾಹ್ನವರೆಗೆ 70ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಗಂಗೋತ್ರಿ ಮತ್ತು ಧರಾಲಿಯಲ್ಲಿ ಎರಡು ಹೆಚ್ಚುವರಿ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಭೂಕುಸಿತಕ್ಕೊಳಗಾದ ಪ್ರದೇಶಕ್ಕೆ ತಲುಪಲು ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡು ತೆರಳಲಾಗುತ್ತಿದೆ. ಕಾರ್ಯಾಚರಣೆಗೆ ವಿವಿಧ ಯಂತ್ರೋಪಕರಣಗಳನ್ನೂ ಬಳಸಲಾಗುತ್ತಿದೆ. ಸಿಲುಕಿಕೊಂಡಿರುವ ನಾಗರಿಕರನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ರಕ್ಷಣಾಪಡೆಯ ಶ್ವಾನಗಳನ್ನು ಬಳಸಿಕೋಳ್ಳಲಾಗುತ್ತಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ ಜನರ ರಕ್ಷಣೆ ಮತ್ತು ಸಂತ್ರಸ್ತರಿಗೆ ಎಲ್ಲಾ ನೆರವನ್ನು ನೀಡಲು ಸೇನೆ ಬದ್ಧವಾಗಿದೆ ಎಂದು ಸೇನೆ ತಿಳಿಸಿದೆ.

 

coorg buzz
coorg buzz