ಕೊಡಗು ಜಿಲ್ಲಾದ್ಯಂತ ಅಕ್ಟೋಬರ್‌ 15ಕ್ಕೆ ಬೃಹತ್‌ ಸ್ವಚ್ಛತಾ ಆಂದೋಲನ – ಕೂರ್ಗ್‌ ಹೋಟೆಲ್‌, ರೆಸಾರ್ಟ್‌ ಅಸೋಸಿಯೇಷನ್‌ ಮುಂದಾಳತ್ವ

Share this post :

ಮಡಿಕೇರಿ : ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕೊಡಗಿನ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಚ ಕೊಡಗು – ಸುಂದರ ಕೊಡಗು ಎಂಬ ಬೃಹತ್ ಸ್ವಚ್ಚತಾ ಆಂದೋಲನ ಆಯೋಜಿಸಲಾಗಿದೆ.
ಬುಧವಾರ(15.10.2025) ಬೆಳಗ್ಗೆ 8 ಗಂಟೆಯಿಂದ ಏಕಕಾಲದಲ್ಲಿ ಕೊಡಗಿನಾದ್ಯಂತ ಈ ಸ್ವಚ್ಚತಾ ಅಭಿಯಾನ ನಡೆಯಲಿದೆ. ಪ್ರತಿ ಊರಿನಲ್ಲಿಯೂ ಅಲ್ಲಿನ ಸಂಘಸಂಸ್ಥೆಗಳು ಸಕಾ೯ರಿ ಮತ್ತು ಸಕಾ೯ರೇತರ ಸಂಸ್ಥೆಗಳು ಈ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ.
ಸ್ವಚ್ಚತೆಯಲ್ಲಿ ಪಾಲ್ಗೊಳ್ಳುವವರಿಗೆ ಅಸೋಸಿಯೇಷನ್ ವತಿಯಿಂದ ಕೈಗೆ ಧರಿಸಲು ಗ್ಲೌಸ್, ತ್ಯಾಜ್ಯ ವಿಲೇವಾರಿ ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಸಂಗ್ರಹಿಸಿದ ತ್ಯಾಜ್ಯಗಳನ್ನು ಸ್ಥಳೀಯ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ವತಿಯಿಂದ ವಿಲೇವಾರಿ ಮಾಡಲಾಗುತ್ತದೆ. ಪ್ರತೀ ಸಂಘಸಂಸ್ಥೆಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಸಂದಭ೯ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಲು ಕೋರಲಾಗಿದೆ.
ಪಾಲ್ಗೊಳ್ಳುವ ಸಂಘ ಸಂಸ್ಥೆಗಳು ತಮ್ಮ ಹೆಸರು ಮತ್ತು ಸ್ವಚ್ಚತೆಯಲ್ಲಿ ಪಾಲ್ಗೊಳ್ಳುವ ಸ್ಥಳದ ವಿವರವನ್ನು 13.10.25 ಅಂದರೆ ನಾಳೆ ಸಂಜೆ 4 ಗಂಟೆಯೊಳಗೆ* ವಾಟ್ಸಪ್ ಮೂಲಕ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹ್ಮದ್ 91 87623 45879 ಈ ಸಂಖ್ಯೆಗೆ ಕಳುಹಿಸಬೇಕು.

coorg buzz
coorg buzz