ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಗುಂಡೇಟಿಗೆ ವ್ಯಕ್ತಿ ಬಲಿ

kodagu news

Share this post :

coorg buzz

ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾದ ಘಟನೆ ಕೊಡಗಿನ (kodagu) ಸಿದ್ದಾಪುರ ಸಮೀಪದ ಅಭ್ಯತ್ ಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಕೊಳಂಬೆ ವಿನು ಬೆಳ್ಯಪ್ಪ ಎಂಬುವವರೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು ಅವರು ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಹಿಂಬದಿಯಿಂದ ಗುಂಡು ಹಾರಿಸಿರುವ ಆರೋಪಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಆಸ್ತಿ ವೈಶಮ್ಯ ಘಟನೆಗೆ ಕಾರಣ ಎಂದು ಹೇಳಲಾಗಿದೆ.