ಗುಡ್ಡೆಹೊಸೂರುವಿನಲ್ಲಿ ಲಾರಿ ಹರಿದು ವ್ಯಕ್ತಿ ಸಾವು

Guddehosuru

Share this post :

coorg buzz

ಇಂದು ಬೆಳಗ್ಗಿನ ಜಾವ ಲಾರಿಯೊಂದು ವ್ಯಕ್ತಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಡ್ಡೆಹೊಸೂರುವಿನಲ್ಲಿ ನಡೆದಿದೆ. ಮೃತನನ್ನು ನಾಪೋಕ್ಲು ಸಮೀಪದ ಕೊಟ್ಟಮುಡಿ ಗ್ರಾಮದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಈತ ಕಳೆದ ರಾತ್ರಿಯಿಂದ ಹೆದ್ದಾರಿ ಬದಿಯಲ್ಲೇ ಅಡ್ಡಾಡುತ್ತಿದ್ದ ಎನ್ನಲಾಗಿದ್ದು, ಇಂದು ಬೆಳಿಗ್ಗೆ ಮೈಸೂರಿನತ್ತ ತೆರಳುತ್ತಿದ್ದ ಲಾರಿ (Truck) ಹರಿದು ಮೃತಾಪಟ್ಟಿದ್ದಾನೆ. ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.