ಯಲಹಂಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾದ ಮಾಹೆ ಬೆಂಗಳೂರು

Bangalore

Share this post :

coorg buzz

ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೆಂಗಳೂರು (Bangalore) ಕ್ಯಾಂಪಸ್, ಯಲಹಂಕದಲ್ಲಿನ ವಿವಿಧ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿದ್ದು, ಅವುಗಳ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಿಂದ ನೆರವೇರಿತು. ಆವಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಹುಪಯೋಗಿ ಸಭಾಂಗಣವನ್ನು ಯಲಹಂಕ ಶಾಸಕ ಶ್ರೀ ಎಸ್.ಆರ್. ವಿಶ್ವನಾಥ್ ಅವರು ಮತ್ತು ಮಾಹೆ ಬೆಂಗಳೂರಿನ ಹೆಚ್ಚುವರಿ ರಿಜಿಸ್ಟ್ರಾರ್ ಶ್ರೀ ರಾಘವೇಂದ್ರ ಪ್ರಭು ಪಿ. ಉದ್ಘಾಟಿಸಿದರು.

ಯಲಹಂಕದ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ಮೂಲಸೌಕರ್ಯ ಸುಧಾರಿಸುವುದು ಮತ್ತು ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (MEMG) ಸಹಯೋಗದೊಂದಿಗೆ ಈ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.

ಬಹುಪಯೋಗಿ ಸಭಾಂಗಣ ನಿರ್ಮಿಸುವ ಜೊತೆಗೆ ಆವಲಹಳ್ಳಿ ಸರ್ಕಾರಿ ಶಾಲೆಗೆ ಪೀಠೋಪಕರಣಗಳನ್ನು ನೀಡಿರುವುದು ಮತ್ತು ಹುಡುಗಿಯರ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದಲ್ಲದೆ ಅಲ್ಲಾಳಸಂದ್ರ ಸರ್ಕಾರಿ ಶಾಲೆ, ಯಲಹಂಕ 4ನೇ ಸರ್ಕಾರಿ ಶಾಲೆಗೂ ಪೀಠೋಪಕರಣಗಳನ್ನು ಒದಗಿಸಲಾಗಿದೆ. ಯಲಹಂಕದ ಬಿಇಒ ಸರ್ಕಾರಿ ಶಾಲೆಯಲ್ಲಿ ಬಾಲಕಿಯರ ಶೌಚಾಲಯವನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ. ಎಸ್. ಆರ್. ವಿಶ್ವನಾಥ್, ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಮಣಿಪಾಲ್ ಸಮೂಹವು ನನ್ನ ಯಲಹಂಕ ಕ್ಷೇತ್ರದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 22 ನೀರಿನ ಶುದ್ಧೀಕರಣ ಯಂತ್ರಗಳು, ಸರ್ಕಾರಿ ಶಾಲೆಗೆ ಪೀಠೋಪಕರಣಗಳು, ಬಹುಪಯೋಗಿ ಹಾಲ್ ಮತ್ತು ಬಾಲಕಿಯರಿಗಾಗಿ ಶೌಚಾಲಯಗಳನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಕೊಡುಗೆಯನ್ನು ನೀಡುತ್ತಿವೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇರುವುದು ನಮಗೆ ಹೆಮ್ಮೆಯ ವಿಷಯ. ಭವಿಷ್ಯದಲ್ಲಿಯೂ ಸಹ ಯಲಹಂಕದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಬೆಂಬಲ ನೀಡಬೇಕೆಂದು ನಾನು MAHE ಗೆ ವಿನಂತಿಸುವೆ’ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಮಾಹೆ ಬೆಂಗಳೂರಿನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. ಮಧು ವೀರರಾಘವನ್, “ಸಮುದಾಯದೊಂದಿಗೆ ಪಾಲ್ಗೊಳ್ಳುವಲ್ಲಿ ಮಾಹೆ ಬೆಂಗಳೂರಿನ ನಿರಂತರ ಬದ್ಧತೆಗೆ ಇದು ಒಂದು ಉದಾಹರಣೆಯಾಗಿದೆ. ಮಾಹೆ ಬೆಂಗಳೂರಿನಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪೋಷಿಸಲು ಬಲವಾದ ಮೂಲಸೌಕರ್ಯ ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ. ಪ್ರತಿ ಮಗುವೂ ಗುಣಮಟ್ಟದ ಶೈಕ್ಷಣಿಕ ವಾತಾವರಣದಲ್ಲಿ ಕಲಿಯಬೇಕು ಮತ್ತು ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿರಬೇಕು” ಎಂದರು.