power outage : ಏಪ್ರಿಲ್ 29 ರಂದು ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..!

Power Cut

Share this post :

ಮಡಿಕೇರಿ : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್12 ರಾಜಸೀಟ್ ಫೀಡರ್‍ನಲ್ಲಿ ಏಪ್ರಿಲ್, 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ಮಂಗಳೂರು ರಸ್ತೆ, ತಾಳತ್ಮನೆ, ಡಿ.ಸಿ ಕಚೇರಿ, ರಾಜಸೀಟ್ ರಸ್ತೆ, ರೇಸ್‍ಕೋರ್ಸ್ ರಸ್ತೆ, ಇಂದಿರಾನಗರ, ಚಾಮುಂಡೇಶ್ವರಿನಗರ, ಸ್ಟೋನ್ ಹಿಲ್, ಎಲ್.ಐ.ಸಿ ರಸ್ತೆ, ಹೊಸ ಬಡಾವಣೆ, ರಿಮೈಂಡ್ ಹೋಮ್ ಹಿಂಭಾಗ, ಡೈರಿ ಫಾರಂ, ಎಫ್.ಎಂ.ಸಿ ಕಾಲೇಜು ರಸ್ತೆ, ಕನ್ನಿಕಾ ಬಡಾವಣೆ, ಮೈತ್ರಿ ಜಂಕ್ಷನ್, ವಿದ್ಯಾನಗರ, ಮುಳಿಯ ಬಡಾವಣೆ, ಹಿಮವನ ಬಡಾವಣೆ, ಕೋರ್ಟ್ ರಸ್ತೆ, ಜಿಲ್ಲಾ ಪಂಚಾಯತ್ ಕಟ್ಟಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.