ಮಡಿಕೇರಿ : ಲಯನ್ಸ್ ಕ್ಲಬ್ ಹಾಗೂ ಮಡಿಕೇರಿ ಶಾಸಕ ಮಂತರ್ ಗೌಡ ಅವರ ವಿಶೇಷ ಅನುದಾನದಲ್ಲಿ ವಾರ್ಡ್ ನಂ.6ರ ಚೈನ್ ಗೇಟ್ ಬಳಿ ನಿರ್ಮಾಣಗೊಂಡಿರುವ ಪ್ರಯಾಣಿಕರ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ಶಾಸಕ ಮಂತರ್ ಗೌಡ ತಂಗುದಾಣವನ್ನು ಉದ್ಘಾಟಿಸಿದರು.
3 ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಪಕ್ಕದಲ್ಲೇ ಅಳವಡಿಸಲಾಗಿರುವ ಬಾಟಲ್ ಡ್ರಾಪ್ ಒಳಗೆ ಬಾಟಲಿಗಳನ್ನು ಹಾಕುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಲಯನ್ಸ್ ಸಂಸ್ಥೆಯ ಗವರ್ನರ್ ಅರವಿಂದ್, ಮಡಿಕೇರಿ ಲಯನ್ಸ್ ಅಧ್ಯಕ್ಷ ಮದನ್, ಪ್ರಮುಖರಾದ ನವೀನ್ ಅಂಬೆಕಲ್, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ನಗರಸಭೆ ಸದಸ್ಯರು ಮುಂತಾದವರು ಇದ್ದರು.



