ಮಡಿಕೇರಿ : ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 8 ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದ್ದು, ಸೆಪ್ಟೆಂಬರ್ 28 ರಂದು ನಡೆಯಲಿದೆ. ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.
ಮೆಹಂದಿ ಹಾಕುವುದು, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕೇಶವಿನ್ಯಾಸ, ಸೀರೆಗೆ ನಿಖರ ಬೆಲೆ ಹೇಳುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಕೆರೆ ದಡ ಆಟ, ಹಣೆಯಲ್ಲಿ ಬಿಸ್ಕೆಟ್ ಇಟ್ಟು ತಿನ್ನುವುದು, ಬಲೂನ್ ಕಾಲಲ್ಲಿ ಹಿಡಿದು ಓಡುವುದು, ಜಾನಪದ ನೃತ್ಯ, ವಾಲಗ ಕುಣಿತ(60 ವರ್ಷ ಒಳಗಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗ), ದಸರಾಗೆ ಸಂಬಂಧಿಸಿದಂತೆ ರಸಪ್ರಶ್ನೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮೇಕಪ್ ಮಾಡುವ ಸ್ಪರ್ಧೆ, ಕೇಶವಿನ್ಯಾಸ, ಮೆಹಂದಿ, ಸ್ಪರ್ಧೆಗಳಿಗೆ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ತಾ.28 ರಂದು ಮಹಿಳಾ ದಸರಾ ದಿನದಂದೇ ಸ್ಪರ್ಧಿಗಳು ತಮ್ಮ ಹೆಸರನ್ನು ಬೆಳಿಗ್ಗೆ ಒಂಭತ್ತು ಗಂಟೆಗೆ ಆಗಮಿಸಿ ನೋಂದಾಯಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಬಾರಿ ಹೆಚ್ಚಿಗೆ ಸೀರೆಗಳನ್ನು ಸ್ಪರ್ಧೆಗೆ ಇರಿಸಲಾಗುವದೆಂದು ಸಂತೋಷ್ ತಿಳಿಸಿದ್ದಾರೆ.
ಮಾರಾಟ ಮಳಿಗೆಗಳು : ಮಹಿಳೆಯರು ತಯಾರಿಸಿದ ಉತ್ಪನ್ನಗಳು ಹಾಗೂ ಇತರ ಉತ್ಪನ್ನಗಳು, ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಸ್ಟಾಲ್‍ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. 15 ಸ್ಟಾಲ್‍ಗಳಿಗೆ ಅವಕಾಶವಿದ್ದು, ಆಸಕ್ತರು ಸಬಿತಾ (8660180251), ಸವಿತಾ(9483785810) ಅವರುಗಳನ್ನು ಸಂಪರ್ಕಿಸಬಹುದಾಗಿದೆ.



