ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ LKG-UKG ಪ್ರಾರಂಭೋತ್ಸವ

Share this post :

ಮರಗೋಡು : ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಹಳ್ಳಿಗಳಲ್ಲಿ ಎಲ್‌ಕೆಜಿ ಇಲ್ಲದಿರುವುದರಿಂದ ಇಂಗ್ಲಿಷ್ ಕಲಿಕೆಗಾಗಿ ಪೋಷಕರು ತಮ್ಮ ಮಕ್ಕಳನ್ನು ದೂರದಲ್ಲಿರುವ ಶಾಲೆಗೆ ವಾಹನಗಳಲ್ಲಿ ಮಕ್ಕಳ ದೈಹಿಕ, ಮಾನಸಿಕ ಒತ್ತಡವನ್ನು ಲೆಕ್ಕಿಸದೆ ಕಳುಹಿಸುತ್ತಿದ್ದರು. ಆದರೆ ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ LKG, UKG ಶಿಕ್ಷಣವನ್ನು ಪಡೆಯಬಹುದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿಯಿಂದ 18 ಮಕ್ಕಳಿಗೆ ಸಮವಸ್ತ್ರ, ಚೇರು, ಜಮಖಾನ, ಬೆಡ್‌ಶೀಟ್, ಚಾಪೆ ಕೊಡುಗೆಯಾಗಿ ನೀಡಲಾಗಿದೆ. ಕುಕ್ಕೆರ ಪ್ರವೀಣ್ ಪೂವಯ್ಯ ಅವರು ಹದಿನೈದು ಕುರ್ಚಿ, ಎರಮುಲ್ಲಾನ್, ರಾಬಿಯ, ರಂಸೀನಾ, ತಾಜ್ ಮಹಲ್ ಸ್ವ ಸಹಾಯ ಸಂಘ, ಶ್ರೀ ಕೃಷ್ಣ ಸ್ವಸಹಾಯ ಸಂಘ, ನೂರ್ ಜಹಾನ್ ಸ್ತ್ರೀ ಶಕ್ತಿ ಸಂಘದ ವತಿಯಿಂದ ಆಟಿಕೆಗಳನ್ನು ಅಂಗನವಾಡಿಗೆ ಕೊಡುಗೆಯಾಗಿ ಪಡೆಯಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಕಾಡು ಮುಖ್ಯಶಿಕ್ಷಕಿ ಪದ್ಮಾವತಿ, ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ಬಡಿಗೇರ್, ಅರೆಕಾಡು ಗ್ರಾಮ ಪಂಚಾಯತಿ ಸದಸ್ಯರಾದ ಯೂಸುಫ್, ಉಷಾ ತಂಗಮ್ಮ, ಕಾರ್ಯದರ್ಶಿ ತೇಜಸ್, ಆಶಾ ಕಾರ್ಯಕರ್ತೆ ಸಾಜಿದ, ಕವಿತಾ, ಅಂಗನವಾಡಿ ಕಾರ್ಯಕರ್ತೆಯಾರಾದ ಹರಿಣಾಕ್ಷಿ, ಸವಿತಾ, ಪಾರ್ವತಿ, ಭವಾನಿ, ಲತಾ, ನಳಿನಿ, ಸಹಾಯಕಿ ರಮ್ಯ ಹಾಜರಿದ್ದರು. ಅರೆಕಾಡು ಅಂಗನವಾಡಿ ಕಾರ್ಯಕರ್ತೆ ಮೇನಕಿ ಸ್ವಾಗತಿಸಿದರು. ಸಿಸಿ ಬಂಗಲೆ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ನಿರೂಪಿಸಿದರು.

coorg buzz
coorg buzz