ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Cauvery College Virajpet

Share this post :

ಗ್ರಂಥಾಲಯಗಳು ಜ್ಞಾನಾರ್ಜನೆಯ ಪ್ರಮುಖ ತಾಣವಾಗಿದ್ದು. ಸಮಾಜದ ಪ್ರಗತಿಗೆ ಹಾಗೂ ಪ್ರತಿ ಓದುಗರ ಬೆಳವಣಿಗೆಗೆ ಗ್ರಂಥಾಲಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿರಾಜಪೇಟೆ (Virajpet) ಕಾವೇರಿ ಕಾಲೇಜಿನ (Cauvery College) ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಚರಿಸಲಾದ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥನ್ ರವರ 133 ನೇ ಜನ್ಮ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು ಪ್ರತಿವರ್ಷ ಆಗಸ್ಟ್ 12ರಂದು ಗ್ರಂಥಪಾಲಕರ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್‌ಆರ್. ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಆದರಿಂದ ಯುವ ಸಮೂಹ ಆದಷ್ಟು ಪುಸ್ತಕಗಳನ್ನು ಓದುದು ಹಾಗೂ ಗ್ರಂಥಾಲಯದ ಸದ್ಬಳಕೆ ಮಾಡಿ ಉತ್ತಮ ಜ್ಞಾನ ಪಡೆಯಬೇಕಿದೆ.ಪ್ರತಿಯೊಬ್ಬರು ದಿನದಲ್ಲಿ ಒಂದಷ್ಟು ಸಮಯವನ್ನು ವೃತ್ತ ಪತ್ರಿಕೆ ಹಾಗೂ ಪುಸ್ತಕವನ್ನು ಓದಲು ಮುಡಿಪಿಡಬೇಕೆಂದರು.

ಕಾಲೇಜಿನ ಗ್ರಂಥಪಾಲಕಿ ಡಾ. ಮುತ್ತಮ್ಮ ಮಾತನಾಡಿ, ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಮೊದಲಿಗರು ಡಾ. ಎಸ್.ಆರ್.ರಂಗನಾಥನ್. ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಆದುದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲೂ ನಾವಿಂದು ಆಧುನಿಕ ಶೈಲಿಯ ಗ್ರಂಥಾಲಯಗಳನ್ನು ಕಾಣುತ್ತಿದ್ದೇವೆಂದರೆ ಅದಕ್ಕೆ ಮೂಲ ಕಾರಣ ಇವರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಕಳೆದರೆ ಮುಂದಿನ ಅವರ ಜೀವನ ಹೆಚ್ಚು ಜ್ಞಾನಮಯ ವಾಗಲು ಸಾಧ್ಯವಾಗುತ್ತದೆ ಎಂದರು .

ಈ ಸಂದರ್ಭದಲ್ಲಿ ಅಂತಿಯ ಬಿ.ಎ. ವಿದ್ಯಾರ್ಥಿನಿ ಎಂ.ಪಿ. ರಾಧಿಕ ಡಾ. ಎಸಾ .ಆರ್ ರಂಗನಾಥನ್ ರವರ ಜೀವನ ಮತ್ತು ಸಾಧನೆಯ ಕುರಿತು ವಿಚಾರ ಮಂಡಿಸಿದರು. ವಿದ್ಯಾರ್ಥಿ ಗಳಿಗೆ ಓದುವ ಹವ್ಯಾಸದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ ಎಂಬ ವಿಷಯದ ಮೇಲೆ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಬಿ.ಎಸ್ ರಕ್ಷಿತಾ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಪ್ರಥಮ ಸ್ಥಾನ ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಆದಿತ್ಯ ಇವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯ ಮುದ್ದಪ್ಪ ಉಪನ್ಯಾಸಕರಾದ ಡಾ. ವೀಣಾ , ಅಂಬಿಕ , ನಾಗರಾಜು , ನಿರ್ಮಿತ , ಸೋಮಣ್ಣ , ಅಕ್ಷಿತಾ ನಾಯ್ಕ್ ,ವನಿತಾ , ಮಾಣಿಕ್ಯ , ಸುನಿಲ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

coorg buzz
coorg buzz