ಮಡಿಕೇರಿ-ವೀರಾಜಪೇಟೆ ಹೆದ್ದಾರಿ ಬದಿಯಲ್ಲಿ ಮತ್ತೆ ಭೂಕುಸಿತ..!

Share this post :

ಮಡಿಕೇರಿ : ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಲ್ಪಿಸುವ ಶಕ್ತಿ ನಗರ ಬಳಿ ರಸ್ತೆ ಬದಿ ಭೂಕುಸಿತವಾಗಿದೆ. ಕೆಲವು ದಿನದ ಹಿಂದೆ ಈ ಜಾಗದಲ್ಲಿ ಕುಸಿತವಾಗಿತ್ತು.
ಅಲ್ಲಿ ಹೆಚ್ಚಿನ ಕುಸಿತವಾಗದಂತೆ ತಡೆಯಲು ಸ್ಯಾಂಡ್‌ ಬ್ಯಾಗ್‌ ಜೋಡಿಸಿಡಲಾಗಿತ್ತು. ಆದರೆ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡಿಸಿಡಲಾಗಿದ್ದ ಮರಳಿನ ಮೂಟೆಗಳು ಕೆಳ ಬದಿಗೆ ಜಾರಿ ಹೋಗಿವೆ. ಅಲ್ಲಿನ ರಸ್ತೆ ಕಡಿದಾಗಿದ್ದು, ಹೆಚ್ಚಿನ ವಾಹನ ಸಂಚಾರ ಈ ಮಾರ್ಗದಲ್ಲಿರುವುದರಿಂದ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಪೊಲೀಸರು ರಸ್ತೆ ಬದಿ ಬ್ಯಾರಿಕೇಡ್‌ ಅಳವಡಿಸಿ ರಸ್ತೆ ಬದಿಯಲ್ಲಿ ವಾಹನಗಳು ಸಂಚರಿಸದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ.

coorg buzz
coorg buzz