ಕುಶಾಲನಗರ : ಧರ್ಮಸ್ಥಳ ವಿರೋಧಿಗಳ ವಿರುದ್ಧ ಪ್ರತಿಭಟನೆ – ರಾಷ್ಟ್ರ ರಕ್ಷಣಾ ಪಡೆ ಸ್ಥಾಪಕ ಪುನೀತ್‌ ಕೆರೆಹಳ್ಳಿ ಪೊಲೀಸ್‌ ವಶಕ್ಕೆ..!

Share this post :

ಕುಶಾಲನಗರ : ಧರ್ಮಸ್ಥಳ ವಿರುದ್ಧ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ವಿವಿಧ ಸಂಘಟನೆಗಳು ಕುಶಾಲನಗರದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದವು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ(punith kerehalli) ಮುಖ್ಯ ಭಾಷಣ ಮಾಡಬೇಕಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪುನೀತ್‌ಗೆ ಪೊಲೀಸರು ಅವಕಾಶ ನೀಡಲಿಲ್ಲ. ವಶಕ್ಕೆ ಪಡೆಯಲು ಮುಂದಾದಾಗ ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಂತರ ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚಿಸಿದ ಪುನೀತ್‌ ಅಲ್ಲಿಂದ ತೆರಳಿದರು. ಈ ಬೆಳವಣಿಗೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

coorg buzz
coorg buzz