ಮಡಿಕೇರಿ : ಕುಶಾಲನಗರದ(kushalanagar) ಕೋಟಿ ಚೆನ್ನಯ್ಯ(koti chennaiah) ಬಿಲ್ಲವ ಸಮಾಜ ವತಿಯಿಂದ ಏಪ್ರಿಲ್ ೨೬, ೨೭ರಂದು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಆ ಪ್ರಯುಕ್ತ ಪಂದ್ಯಾವಳಿಯ ಲೋಗೋ(Logo) ಬಿಡುಗಡೆ ಕಾರ್ಯಕ್ರಮ ಬೈಚನಹಳ್ಳಿಯ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಬಿ.ಟಿ. ರಮೇಶ್, ಅಧ್ಯಕ್ಷ ಸುಧೀರ್ ಲೋಗೋ ಬಿಡುಗಡೆಗೊಳಿಸಿದರು. ಪಂದ್ಯಾವಳಿ ಯಶಸ್ಸಿಗೆ ಸಮುದಾಯದ ತಂಡಗಳು, ಬಾಂಧವರು ಸಕಲ ರೀತಿಯಲ್ಲಿ ಕೈಜೋಡಿಸುವಂತೆ ಕೋರಿದರು.
