ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ 02 : Day 02 – ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಬಿ ರಾಯಲ್ಸ್‌ಗೆ ಗೆಲುವು

Share this post :

ಮಡಿಕೇರಿ : ಕೂರ್ಗ್ ಕ್ರಿಕೆಟ್ ಫೌಂಡೇಶನ್(coorg foundation) ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್(cricket) ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 02ರ ಎರಡನೇ ದಿನದ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಬಿ ರಾಯಲ್ಸ್ ತಂಡ ಗೆಲುವು ದಾಖಲಿಸಿದವು.
ಪ್ರಗತಿ ಕ್ರಿಕೆಟರ್ಸ್ ಮತ್ತು ಕೂರ್ಗ್ ಯುನೈಟೆಡ್ ತಂಡಗಳ ನಡುವೆ ನಡೆದ ದಿನದ ಮೊದಲ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ತಂಡ ೨೦ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೫೧ ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ ೧೮.೫ ಓವರ್ ಗಳಲ್ಲಿ ೧೨೧ ರನ್ ಗಳನ್ನು ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ ಪ್ರಗತಿ ಕ್ರಿಕೆಟರ್ಸ್ ತಂಡ ಜಯ ದಾಖಲಿಸಿತು. ಕೂರ್ಗ್ ಯುನೈಟೆಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಪ್ರಗತಿ ಕ್ರಿಕೆಟರ್ಸ್ ನ ತಂಬುಕುತ್ತೀರ ಸುಖೇಶ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಂಟಿಬಿ ರಾಯಲ್ಸ್ ತಂಡ ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೩೭ ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ ತಂಡ ೨೦ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೩೨ ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಎಂಟಿಬಿ ರಾಯಲ್ಸ್ ತಂಡದ ಕರುಂಬಯ್ಯ ಎಂ.ಕೆ. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.