ಕೊಡಗು ಗೌಡ (Kodagu Gowda) ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ನೇತೃತ್ವದಲ್ಲಿ ಗೌಡ ಸಮುದಾಯದ ನಿಯೋಗ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿ ಚರ್ಚಿಸಿತು. ಗೌಡ ಸಮಾಜಕ್ಕೆ ಭೂಮಿ ಮಂಜೂರು ಮಾಡುವಂತೆ ಈ ವೇಳೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಉಪಸ್ಥಿತರಿದ್ದರು. ನಿಯೋಗದಲ್ಲಿ ಕೊಲ್ಯದ ಗಿರೀಶ್, ಕುಯ್ಯಮುಡಿ ವಸಂತ, ದಂಬೆಕೋಡಿ ಆನಂದ, ಹುದೇರಿ ರಾಜೇಂದ್ರ, ಪೊನ್ನಚ್ಚನ ಮಧು, ಅಮೆ ಸೀತಾರಾಮ ಹಾಗೂ ಇನ್ನಿತರ ಪ್ರಮುಖರು ಇದ್ದರು.