ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌(ರಿ) ವಿದ್ಯಾರ್ಥಿ ಘಟಕ ಪುನಾರಚನೆ – ಅಧ್ಯಕ್ಷರಾಗಿ ಟಿ.ಕೆ. ಕಿರಣ್‌ ಆಯ್ಕೆ

Share this post :

ಮಡಿಕೇರಿ : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌(ರಿ) ಇದರ ವಿದ್ಯಾರ್ಥಿ ಘಟಕವನ್ನು ಪುನಾರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಟಿ.ಕೆ. ಕಿರಣ್‌, ಕಾರ್ಯದರ್ಶಿಯಾಗಿ

ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಟ್ರಸ್ಟ್‌ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವೈ.ಒ. ಶ್ರಾವ್ಯ, ಸಹಕಾರ್ಯದರ್ಶಿಯಾಗಿ ಬಿ.ಜೆ. ದೀಕ್ಷಾ, ಖಜಾಂಜಿಯಾಗಿ ಪಿ.ವಿ. ನವಿತ್, ಯು.ಯು. ಮೇಘನಾ, ಕ್ರೀಡಾ ಸಂಚಾಲಕರಾಗಿ ಬಿ.ವೈ. ಸುಜನ್, ಲಿಖಿತ ರೈ, ಪೂಜಾ ಕಾರ್ಯಕ್ರಮದ ಉಸ್ತುವಾರಿಗಳಾಗಿ ಟಿ.ಕೆ. ವಿನಯ್, ಕೆ.ಪಿ. ಪ್ರಜಿತ್, ಆರಾಧ್ಯ, ಕಾವ್ಯಶ್ರೀ, ಭಜನೆ ಕಾರ್ಯಕ್ರಮದ ಉಸ್ತುವಾರಿಗಳಾಗಿ ಯಶಸ್ವಿನಿ, ಅಕ್ಷನ, ಭೂಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಕರಾಗಿ ಎಂ.ಎ. ದೀಕ್ಷಾ, ಎಂ.ಜೆ. ಯಶಸ್, ಜೀವಿತಾ, ಕುಣಿತ ಭಜನೆ ನಿರ್ವಾಹಕರಾಗಿ ಕೌಶಿಕ, ವಂಶಿಕ, ವಿಶ್ರುತ ಅವರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರಾಗಿ ಶ್ರೀನಿಧಿ, ತೇಜಸ್ವಿನಿ, ಆಧ್ಯಾ, ಕನ್ನಿಕಾ, ಗ್ರೀಷ್ಮ ಆಯ್ಕೆಯಾಗಿದ್ದಾರೆ. ಒಂದು ವರ್ಷದಿಂದ ವಿದ್ಯಾರ್ಥಿ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಟ್ರಸ್ಟ್‌ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು, ಅವರಿಗೆ ಸಂಸ್ಕೃತಿಯ ಅರಿವು ಮೂಡಿಸುವುದು ಮತ್ತು ನಾಯಕತ್ವ ಗುಣ ಬೆಳೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಟ್ರಸ್ಟ್‌ ಪ್ರಮುಖರು ತಿಳಿಸಿದ್ದಾರೆ.

coorg buzz
coorg buzz