2nd PUC Result: ನಾಳೆ ದ್ವಿತೀಯ ಪಿಯು ಫಲಿತಾಂಶ: ನೋಡುವುದು ಹೇಗೆ?

2nd PUC Result

Share this post :

ದ್ವಿತೀಯ ಪಿಯು (2nd PUC) ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್. ಮಾರ್ಚ್ 1ರಿಂದ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಅಂದರೆ ಏಪ್ರಿಲ್ 8ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ವೆಬ್​ಸೈಟ್​ನಲ್ಲಿ PUC ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಆನ್​​ಲೈನ್​​ನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ, ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

karresults.nic.in ಮತ್ತು kseab.karnataka.gov.in ಈ ಎರಡು ವೆಬ್​ಸೈಟ್​ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಿರಲಿದೆ.

ಆನ್​ಲೈನ್​ನಲ್ಲಿ ಫಲಿತಾಂಶ ನೋಡುವುದ್ಹೇಗೆ?

* ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.

* ಹೋಂ ಪೇಜ್​ನಲ್ಲಿ, Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.

* ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು.

* Second PU Results 2025 ಎಂಬುದು ಸ್ಕ್ರೀನ್​ನಲ್ಲಿ ಕಾಣಿಸುತ್ತದೆ.

* ನಂತರ ರಿಸಲ್ಟ್ ನೋಡಬಹುದು. ಅಲ್ಲಿಯೇ ಪಿಡಿಎಫ್ ಡೌನ್​ಲೋಡ್ ಮಾಡಲು ಅವಕಾಶ ಇರುತ್ತದೆ.

ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.