ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಗಿನ್ನಿಸ್‌ ವಿಶ್ವ ದಾಖಲೆಗೆ ಸಜ್ಜಾದ ಮದೆನಾಡಿನ ಸಿಂಚನಾ..!

Sinchana in the Dimbasana yoga pose

Share this post :

ಮಡಿಕೇರಿ : ಕೊಡಗು ಪತ್ರಕರ್ತರ ಸಂಘ(ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಕೊಡಗಿನ ಯುವ ಯೋಗಪಟು ಮದೆನಾಡಿನ ಸಿಂಚನಾಳ (Sinchana) ಯೋಗ ಪ್ರದರ್ಶನವನ್ನು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು (International yoga day ) ಮಡಿಕೇರಿಯಲ್ಲಿ ಆಯೋಜಿತವಾಗಿದೆ.

ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಜೂನ್ 21 ರಂದು ಶನಿವಾರ ಸಂಜೆ 6.30 ಗಂಟೆಗೆ ಸಿಂಚನಾಳ ಯೋಗಪ್ರದರ್ಶನವಿರಲಿದೆ.30 ನಿಮಿಷ 5 ಸೆಕೆಂಡ್ ಕಾಲ ಸಿಂಚನಾ ಡಿಂಬಾಸನ ಯೋಗ ಭಂಗಿಯಲ್ಲಿರುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಮಾಡಲಿದ್ದು, ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ (Guinness World Record) ಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ.

ಈ ಮೂಲಕ ಸಿಂಚನಾಳ ಯೋಗ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.