ಚೆಟ್ಟಳ್ಳಿ ಕಾಫಿ ಬೋರ್ಡ್ನಲ್ಲಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ; ಪದವೀಧರರು ಅರ್ಹರು
* ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿ ಕಾಫಿ ಬೋರ್ಡ್ ಗೆ ಯುವ ವೃತ್ತಿಪರ ಹುದ್ದೆಗೆ ನೇರ ಸಂದರ್ಶನದ ಮೂಲಕ ಅರ್ಹ ಎಂ.ಎಸ್ಸಿ ಪದವೀಧರರನ್ನು ಆಹ್ವಾನಿಸಲಾಗಿದೆ. ಮಾಸಿಕ 21,000 ರೂ. ಸಂಬಳದ ಈ ಅವಕಾಶ, ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸೂಕ್ತವಾಗಿದೆ. ವಯಸ್ಸಿನ ಮಿತಿ 18-35 ವರ್ಷ ಎಂದು ನಿಗದಿಪಡಿಸಲಾಗಿದೆ. ಆಸಕ್ತ ಅರ್ಹ .ಎಸ್ಸಿ ಪದವೀಧರರು ಅಕ್ಟೋಬರ್ 08 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿರುವ ಕೃಷಿ ರಸಾಯನಶಾಸ್ತ್ರ/ಮಣ್ಣು ಪರೀಕ್ಷಾ ಪ್ರಯೋಗಾಲಯ ವಿಭಾಗದಲ್ಲಿ “ಕೊಡಗು ಪ್ರದೇಶದ ಕಾಫಿ ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ” ಯೋಜನೆಯಡಿ ಯುವ ವೃತ್ತಿಪರರ ತಾತ್ಕಾಲಿಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಕೊಡಗಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್08 ರಂದು ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಬಹುದು.
ಹುದ್ದೆಗಳ ಅಧಿಸೂಚನೆ:-
ಸಂಸ್ಥೆಯ ಹೆಸರು : ಕಾಫಿ ಬೋರ್ಡ್ ಆಫ್ ಇಂಡಿಯಾ.
ಹುದ್ದೆ ಸಂಖ್ಯೆ: 1.
ಉದ್ಯೋಗ ಸ್ಥಳ: ಕೊಡಗು
ಹುದ್ದೆಯ ಹೆಸರು: ಯುವ ವೃತ್ತಿಪರ
ಸಂಬಳ: ತಿಂಗಳಿಗೆ ರೂ. 21,000/-
ಶೈಕ್ಷಣಿಕ ಅರ್ಹತೆ:
ಕಾಫಿ ಮಂಡಳಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ: ಉಪನಿರ್ದೇಶಕರ ಕಚೇರಿ (ಸಂಶೋಧನೆ), ಕಾಫಿ ಸಂಶೋಧನಾ ಉಪಕೇಂದ್ರ, ಚೆಟ್ಟಳ್ಳಿ, ಕೊಡಗು ಜಿಲ್ಲೆ.



