ಜವಾಹರ್‌ ನವೋದಯ ವಿದ್ಯಾಲಯ ೧೧ ನೇ ತರಗತಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರವೇಶಕ್ಕೆ ಅರ್ಜಿ ಆಹ್ವಾನ

Share this post :

ಮಡಿಕೇರಿ : ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೫-೨೬ ನೇ ಸಾಲಿನ ಖಾಲಿ ಇರುವ ೧೧ ನೇ ತರಗತಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಸಿಬಿಎಸ್‌ಇ ಅಥವಾ ಮಾನ್ಯತೆ ಪಡೆದ ರಾಜ್ಯ ಮಂಡಳಿಯಿAದ ಹತ್ತನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.೬೦ ಅಂಕಗಳನ್ನು ಪಡೆದಿರಬೇಕು. ವಿಜ್ಞಾನ ಮತ್ತು ವಾಣಿಜ್ಯ ವಿಷಯದಲ್ಲಿ ಕನಿಷ್ಠ ೬೦ ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ಅರ್ಜಿ ಸಲ್ಲಿಸಲು ಆನ್‌ಲೈನ್ ಮತ್ತು ಆಪ್‌ಲೈನ್ ಎರಡು ಮಾರ್ಗಗಳಲ್ಲಿ ಅವಕಾಶವಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ ೨೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನವೋದಯ ಶಾಲೆಯ ದೂ.ಸಂ.೯೪೮೧೪೨೬೧೮೪, ೯೩೮೦೮೦೨೧೭೯ https://drive.google.com/file/d/1YPFdXUV8r17nZk499A9JHyMWrN4VQzv9. view?usp=sharing ನ್ನು ಸಂಪರ್ಕಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

coorg buzz
coorg buzz