ಕೇರಳದ ತಿರುವನಂತಪುರಂನಲ್ಲಿ ನಡೆದ ಸ್ಟಿಫನ್ ಜಾಕೋಬ್ ಕೋಶಿ ಅಂತಾರಾರಾಷ್ಟ್ರೀಯ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾರತೀಯ ಟೆಕ್ ಸಿಲ್ಕೋ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಹಿರಿಯ ಬಾಸ್ಕೆಟ್ ಬಾಲ್ ತಂಡ ಮೂರು ಚಿನ್ನದ ಪದಕ ಗೆದ್ದಿದ್ದಾರೆ. 55 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಒಂದು, 60 ವರ್ಷ ಮೇಲ್ಪಟ್ಟದ ತಂಡದಲ್ಲಿ ಒಂದು ಮತ್ತು 65 ವರ್ಷ ಮೇಲ್ಪಟ್ಟ ತಂಡದಲ್ಲಿ ಒಂದು ಚಿನ್ನದ ಪದಕ ಬಾಚಿಕೊಂಡಿದ್ದಾರೆ.
