Ind Vs Eng ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರೋಚಕವಾಗಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ..!‌ – ಉಫ್..!‌ ಎಂಥಾ ಮ್ಯಾಚ್‌ ಗರು..! ಎಂದ ಕ್ರಿಕೆಟ್‌ ಫ್ಯಾನ್ಸ್

Share this post :

coorg buzz

ಇಂಗ್ಲೆಂಡ್ : ಇಂಗ್ಲೆಡ್‌ ವಿರುದ್ಧದ ಆಂಡರ್ಸನ್‌ ತೆಂಡೂಲ್ಕರ್‌ ಸರಣಿಯ ಐದನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್‌ ಅಂತರದಿಂದ ರೋಚಕವಾಗಿ ಗೆಲುವು ಸಾಧಿಸಿದೆ. ಕೊನೆಯ ದಿನ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು 35 ರನ್‌ ಅಗತ್ಯವಿತ್ತು. ಭಾರತ ಗೆಲ್ಲೋದಕ್ಕೆ 04 ವಿಕೆಟ್‌ ಕಬಳಿಸಬೇಕಿತ್ತು.
ದಿನದ ಮೊದಲ ಸೆಷನ್‌ನ ಮೊದಲ ಓವರ್‌ನಲ್ಲಿ ಪ್ರಸಿದ್ಧ್‌ ಕೃಷ್ಣ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ ಇಂಗ್ಲೀಷ್‌ ಬ್ಯಾಟರ್‌ಗಳು ಆತಂಕ ಹುಟ್ಟಿಸಿದರು. ಆದರೆ ಅದ್ಭುತ ಲಯದಲ್ಲಿರುವ ಸಿರಾಜ್‌ ತಮ್ಮ ಮೊನಚಿನ ಬೌಲಿಂಗ್‌ ದಾಳಿ ಸಂಘಟಿಸಿ ಬ್ಯಾಟರ್‌ಗಳಿಗೆ ಕಂಟಕವಾದರು. ಇಂದು ಮೂರು ವಿಕೆಟ್‌ ಕಬಳಿಸಿದ ಸಿರಾಜ್‌, ಇನ್ನಿಂಗ್ಸ್‌ನಲ್ಲಿ 05 ವಿಕೆಟ್‌ ಪಡೆದು ಸಂಭ್ರಮಿಸಿದರು. ಕೊನೆಯ ವಿಕೆಟ್‌ಗೆ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಎಟ್ಕಿನ್ಸನ್‌ ಅವರನ್ನ ಯಾರ್ಕರ್‌ ಎಸೆತದ ಮೂಲಕ ಬೌಲ್ಡ್‌ ಮಾಡಿ ತಂಡಕ್ಕೆ ಗೆಲುವು ತಂದಿತ್ತರು. ಈ ಗೆಲುವಿನೊಂದಿಗೆ ಸರಣಿ 02-02 ಸಮಬಲದೊಂದಿಗೆ ಮುಕ್ತಾಯ ಕಂಡಂತಾಗಿದೆ.
ಒಂದು ಕೈನಲ್ಲಿ ವೋಕ್ಸ್‌ ಬ್ಯಾಟಿಂಗ್…‌
ಎಡಗೈ ಗಾಯದಿಂದ ಬಳಲುತ್ತಿರುವ ಬೌಲರ್‌ ಕ್ರಿಸ್‌ ವೋಕ್ಸ್‌ ಬೌಲಿಂಗ್‌ ಮಾಡಿರಲಿಲ್ಲ. ಆದರೆ 9 ವಿಕೆಟ್‌ ಬಿದ್ದಾಗ ಗೆಲುವಿಗೆ 17 ರನ್‌ ಬೇಕಿತ್ತು. ಹಾಗಾಗಿ ಅನಿವಾರ್ಯವಾಗಿ 11ನೇ ಬ್ಯಾಟರ್‌ ಆಗಿ ಬ್ಯಾಟಿಂಗ್‌ಗೆ ಬರಬೇಕಾಯಿತು. ಮೈದಾನದಲ್ಲಿ ತುಂಬಿದ್ದ ಕ್ರೀಡಾಭಿಮಾನಿಗಳು ಎದ್ದು ನಿಂತು ಗೌರವಿಸಿದರು. ಹಿಂದೊಮ್ಮೆ ಮಾಲ್ಕಮ್‌ ಮಾರ್ಷಲ್‌ ಇದೇ ರೀತಿ ಒಂದು ಕೈನಲ್ಲಿ ಬ್ಯಾಟಿಂಗ್‌ ಮಾಡಿದ್ದರು. ಆ ದೃಶ್ಯ ಮರುಕಳಿಸಿದಂತಾಗಿತ್ತು ಈ ಪಂದ್ಯದಲ್ಲಿ. ಆದರೆ ಒಂದು ಎಸೆತವನ್ನೂ ಎದುರಿಸಲು ಎಟ್ಕಿನ್ಸನ್‌ ಅವಕಾಶ ಕೊಡಲಿಲ್ಲ.