Champions Trophy IND vs PAK: ನಾಳೆ ಭಾರತ – ಪಾಕ್ ಹೈವೋಲ್ಟೇಜ್ ಪಂದ್ಯ

India - pak match

Share this post :

ಭಾರತ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಆಡಿದ ಮೊದಲ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಿದೆ. ಈಗ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕೇವಲ ಎರಡು ದೇಶಗಳ ಕ್ರೀಡಾಭಿಮಾನಿಗಳಷ್ಟೇ ಅಲ್ಲ, ಜಗತ್ತಿನ ಕ್ರೀಡಾಭಿಮಾನಿಗಳೇ ಎದುರು ನೋಡುತ್ತಿದೆ. ಎರಡೂ ದೇಶಗಳಿಗೂ ಪ್ರತಿಷ್ಠೆಯ ಪಂದ್ಯವಾಗಿರುವುದರಿಂದ ಗೆಲುವಿಗಾಗಿ ಪ್ರಬಲ ಪೈಪೋಟಿ ಇರುತ್ತದೆ.

ಫೆಬ್ರವರಿ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂಗಳ ಸಜ್ಜಾಗಿದೆ. ಈಗಾಗಲೇ ಪಂದ್ಯದ ಅಷ್ಟೂ ಟಿಕೆಟ್‌ಗಳು ಮಾರಾಟವಾಗಿವೆ. 25 ಸಾವಿರ ಆಸನ ಸಾಮರ್ಥ್ಯದ ಮೈದಾನ ಭರ್ತಿಯಾಗಲಿದೆ. ಟಿ.ವಿ. ಹಾಗೂ ಒಟಿಟಿ ವೇದಿಕೆಯಲ್ಲೂ ಕೋಟ್ಯಂಟರ ಜನರು ಈ ಪಂದ್ಯವನ್ನು ವೀಕ್ಷಿಸುತ್ತಾರೆ. ಈ ಪಂದ್ಯ ಪಾಕಿಸ್ತಾನಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸೆಮಿಫೈನಲ್‌ ಹಂತ ಪ್ರವೇಶಿಸಲು ಭಾರತ ಈ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯ.

India - Pak match

ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಪಂದ್ಯಗಳು ಈಗ ನಡೆಯುತ್ತಿಲ್ಲ. ಹೀಗಾಗಿ ಈ ತಂಡಗಳು ಐಸಿಸಿ ಟ್ರೋಫಿಯಲ್ಲಿ ಮಾತ್ರ ಆಡುತ್ತಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ತಂಡದಲ್ಲಿದ್ದು ಚಿತ್ತ ಕದ್ದಿದೆ. ಇಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟಾರೆ 135 ಪಂದ್ಯಗಳನ್ನು ಆಡಿವೆ.

ಈ ವೇಳೆ ಭಾರತ 57 ಜಯ ಸಾಧಿಸಿದ್ದು, ಪಾಕ್‌ 73 ಪಂದ್ಯಗಳನ್ನು ಗೆದ್ದಿದೆ. 5 ಪಂದ್ಯಗಳು ಫಲಿತಾಂಶ ಹೀನಾಯವಾಗಿದೆ. ಈಗಾಗಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳು ಒಟ್ಟು 5 ಪಂದ್ಯಗಳು ನಡೆದಿವೆ. ಈ ವೇಳೆ ಪಾಕಿಸ್ತಾನ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಭಾರತ 2 ಪಂದ್ಯಗಳನ್ನು ಗೆದ್ದಿದೆ. ಆದರೆ ಭಾರತ ಸದ್ಯದ ಪ್ರದರ್ಶನ ಅಮೋಘವಾಗಿದ್ದು ಎದುರಾಳಿಗೆ ನಡುಕ ಹುಟ್ಟಿಸಿದೆ.

2005ರಲ್ಲಿ ಪಾಕಿಸ್ತಾನ, ಭಾರತ ಪ್ರವಾಸವನ್ನು ಮಾಡಿತ್ತು. ಈ ಟೂರ್ನಿಯ ಎರಡನೇ ಪಂದ್ಯ ವಿಶಾಖಾಪಟ್ಟಣಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 356 ರನ್‌ ಸೇರಿಸಿತು. ಇದರು ಉಭಯ ದೇಶಗಳ ನಡುವಣ ಗರಿಷ್ಠ ಮೊತ್ತವಾಗಿದೆ. 1978ರಲ್ಲಿ ಭಾರತ, ಪಾಕಿಸ್ತಾನ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಏಕದಿನ ಸರಣಿಯನ್ನು ಆಡಲಾಗಿತ್ತು.

ಈ ವೇಳೆ ಟೀಮ್ ಇಂಡಿಯಾ ಸಿಲ್ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ 78 ರನ್‌ಗಳಿಗೆ ಆಲೌಟ್‌ ಆಗಿತ್ತು. ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್‌ ಸಯೀದ್ ಅನ್ವರ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಚೆನ್ನೈನಲ್ಲಿ 1997ರಲ್ಲಿ 194 ರನ್‌ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧ ಭಾರತದ ಪರ ಗರಿಷ್ಠ ರನ್‌ ಬಾರಿಸಿದ ಹೆಗ್ಗಳಿಕೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರದ್ದಾಗಿದೆ. ಇವರು 2012ರಲ್ಲಿ ಮೀರ್‌ಪುರ್‌ದಲ್ಲಿ ನಡೆದ ಪಂದ್ಯದಲ್ಲಿ 183 ರನ್‌ ಸಿಡಿಸಿದ್ದರು.