ಹುಲಿತಾಳ : ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಹಾನಿ

Share this post :

ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಸಣ್ಣ ಪುಟ್ಟ ಅನಾಹುತ ಸಂಭವಿಸಿದ ವರದಿಯಾಗಿದೆ.
ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದ ಭಾಗಶಃ ಹಾನಿಯಾಗಿದೆ. ಇಲ್ಲಿನ ಎಚ್‌.ಟಿ. ಜಾನಕಿ ಎಂಬವರ ಮನೆಯ ಮುಂಭಾಗದ ಕೋಣೆಯ ಗೋಡೆ ರಾತ್ರಿ 8.30ರ ವೇಳೆಗೆ ಕುಸಿದಿದೆ. ಮನೆಯಲ್ಲಿ ಜನ ಇದ್ದರಾದರೂ, ಒಳ ಭಾಗದಲ್ಲಿದ್ದ ಕಾರಣ ಯಾರಿಗೂ ಸಮಸ್ಯೆಯಾಗಿಲ್ಲ. ಆದರೆ ಮನೆಯೊಳಗಿದ್ದ ವಸ್ತುಗಳು ಜಖಂಗೊಂಡಿದ್ದು, ಉಳಿದ ಕೋಣೆಗಳ ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯ ಪಂಚಾಯಿತಿಯವರು ಬಂದು ಪರಿಶೀಲನೆ ನಡೆಸಿ ತೆರಳಿದ್ದಾರೆಂದು ಜಾನಕಿಯವರ ಪುತ್ರ ಹರೀಶ್‌ ತಿಳಿಸಿದ್ದಾರೆ.

coorg buzz
coorg buzz