ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡಲು ಇಲ್ಲಿದೆ ಟಿಪ್ಸ್

childrens Away from Smartphones

Share this post :

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು . ತಮ್ಮ ಮಕ್ಕಳು ಮುಂದೆ ಜೀವನದಲ್ಲಿ ಉತ್ತಮ ನಾಗರಿಕರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಅವರಿಗೆ ನಾವು ಒಳ್ಳೆಯದನ್ನೇ ಕಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರಸ್ತುತ ಮೊಬೈಲ್ ಬಳಕೆ ಚಟವಾಗಿ ಮಾರ್ಪಟ್ಟಿದೆ. ಹಲವು ಪೋಷಕರು ದಿನವಿಡೀ ಸ್ಮಾರ್ಟ್‌ಫೋನ್‌ (Smartphones) ಬಳಕೆಯಲ್ಲಿ ನಿರತರಾಗಿರುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಕೆಲಸ ಸಮಯವನ್ನು ಕಳೆಯುವ ಬದಲು, ಮೊಬೈಲ್ ಒಂದು ಅಭ್ಯಾಸವಾಗಿದೆ. ಇದನ್ನು ನೋಡಿ ಮಕ್ಕಳು ಸಹ ಫೋನ್‌ಗಳ ಕೆಟ್ಟ ಅಭ್ಯಾಸಕ್ಕೆ ಬಲಿಯಾಗುತ್ತಿದ್ದಾರೆ.

ಭಾರತದಲ್ಲಿ 14 ವರ್ಷದಿಂದ 16 ವರ್ಷಗಳ ನಡುವಿನ ಶೇ.82 ರಷ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದು ಗೊತ್ತಿದೆ. ಮಕ್ಕಳಿಗೆ ಮೊಬೈಲ್ ಕೊಡುವುದು ದೊಡ್ಡ ಅಪಾಯವೇ ಸರಿ. ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳಲ್ಲಿ ಮೊಬೈಲ್ ಫೋನ್ ಬಳಸುವ ಅಭ್ಯಾಸ ಹೋಗಲಾಡಿಸಲು ಕೆಲವು ಸಲಹೆಗಳನ್ನು ಪಾಲಿಸಬೇಕು ಎಂದು ತಜ್ಞರು ಹೇಳಿದ್ದಾರೆ.

* ಮೊದಲನೆಯದಾಗಿ, ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ ಇರುವಾಗ ಸಾಧ್ಯವಾದಷ್ಟು ಫೋನ್‌ಗಳಿಂದ ದೂರವಿರಿ. ಏಕೆಂದರೆ ನೀವು ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರೆ, ನಿಮ್ಮ ಮಕ್ಕಳು ನಿಮ್ಮನ್ನು ನೋಡಿದ ಬಳಿಕ, ನಿಮ್ಮ ಮೊಬೈಲ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ಇದು ಮಕ್ಕಳಿಗೆ ಮೊಬೈಲ್ ಬಳಕೆ ಚಟವಾಗಿ ಮಾರ್ಪಡಬಹುದು.

* ಮಕ್ಕಳು ಊಟ ಮಾಡುವಾಗ ಮೊಬೈಲ್ ಕೊಡಬೇಡಿ. ನೀವು ಹಾಗೆ ಮಾಡಿದರೆ, ತಿನ್ನುವ ಮೊದಲು ಪ್ರತಿ ಬಾರಿಯೂ ನಿಮ್ಮ ಫೋನ್ ಅನ್ನು ಅವರಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅವರಿಗೆ ಊಟ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಿಮ್ಮ ಮೊಬೈಲ್ ಅನ್ನು ಸ್ವಲ್ಪ ದೂರವಿಡಿ. ಮಕ್ಕಳನ್ನು ಫೋನ್‌ಗಳಿಂದ ದೂರವಿಡುವುದು ಸರಿಯಾದ ಪರಿಹಾರ. ಅವರನ್ನು ಹೊರಾಂಗಣ ಆಟಗಳು ಅಥವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಪಿಸಿ.

* ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮುಗಿದ ಈ ಕೆಲಸ ಮಾಡಲೇಬೇಕು. ನಿಮ್ಮ ಫೋನಿನಲ್ಲಿ ಇಂಟರ್ನೆಟ್ ಅಥವಾ ವೈ-ಫೈ ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಅನ್ನು ಬಳಸುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಅನುಮತಿಯಿಲ್ಲದೆ ಬಳಸದಂತೆ ನಿಮ್ಮ ಮೊಬೈಲ್‌ನಲ್ಲಿ ಪಾಸ್‌ವರ್ಡ್ ಹಾಕಿ.

* ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮುಗಿದ ಈ ಕೆಲಸ ಮಾಡಲೇಬೇಕು. ನಿಮ್ಮ ಫೋನಿನಲ್ಲಿ ಇಂಟರ್ನೆಟ್ ಅಥವಾ ವೈ-ಫೈ ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಅನ್ನು ಬಳಸುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಅನುಮತಿಯಿಲ್ಲದೆ ಬಳಸದಂತೆ ನಿಮ್ಮ ಮೊಬೈಲ್‌ನಲ್ಲಿ ಪಾಸ್‌ವರ್ಡ್ ಹಾಕಬೇಕು.

* ನಿಮ್ಮ ಮಕ್ಕಳು ಸ್ಮಾರ್ಟ್ ಟಿವಿ ವೀಕ್ಷಿಸಲು ಸಮಯವನ್ನು ಸಹ ನೀವು ನಿಗದಿಪಡಿಸಬಹುದು. ಟಿವಿ ನೋಡುವುದರಿಂದ ಮಕ್ಕಳ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಮನೆಯಲ್ಲಿ ಮಕ್ಕಳು ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು ಮತ್ತು ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಕೇಳುವ ಮೂಲಕ ಮನರಂಜನೆ ಪಡೆಯುವಂತೆ ಪ್ರೋತ್ಸಾಹಿಸಿ.

* ನಿಮ್ಮ ಮಕ್ಕಳು ಒಂದು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ಬಳಸಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇದರಿಂದ ಅವರಿಗೂ ಕೂಡ ಅರ್ಥವಾಗುತ್ತದೆ. ಯಾವುದೇ ಕಾರಣಕ್ಕೂ 18 ತಿಂಗಳ ಒಳಗಿನ ಮಕ್ಕಳಿಗೆ ಫೋನ್ ಕೊಡಬಾರದು. 18 ತಿಂಗಳಿಂದ 24 ತಿಂಗಳ ಒಳಗಿನ ಮಕ್ಕಳಿಗೆ ಪೋಷಕರೇ ಪಕ್ಕದಲ್ಲಿ ಕುಳಿತು ಮಕ್ಕಳ ಪ್ರೋಗ್ರಾಂಗಳನ್ನು ತೋರಿಸಬಹುದು. ಎರಡು ವರ್ಷದಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಒಂದು ದಿನಕ್ಕೆ ಒಂದು ಗಂಟೆ ಫೋನ್ ಉಪಯೋಗಿಸಲು ಅವಕಾಶ ನೀಡಿ. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳು ಕೂಡ ಇರುತ್ತದೆ. ಇದದರಿಂದ ಜೊತೆಗೆ ಚೆನ್ನಾಗಿ ನಿದ್ರೆ ಮಾಡಬೇಕಾಗಿರುತ್ತದೆ. ಇದೆಲ್ಲವನ್ನು ನೋಡಿಕೊಂಡು ದಿನಕ್ಕೆ ಇಂತಿಷ್ಟು ಸಮಯ ಮೊಬೈಲ್ ಬಳಕೆಗೆ ಸಮಯ ನೀಡಬೇಕು.

* ಮೊಬೈಲ್ ಅತಿಯಾದ ಬಳಕೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಮೊಬೈಲ್‌ನಲ್ಲಿ ಕೆಲಸ ಮಾಡಬಾರದು. ಇದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ.

* ಇದಲ್ಲದೆ, ಫೋನ್‌ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದು ಅಥವಾ ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುವುದರಿಂದ ದೇಹವು ಕೆಟ್ಟ ಭಂಗಿಯಿಂದ ಬಳಲು ಕಾರಣವಾಗುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳಬೇಡಿ. ಇದರಿಂದ ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚಿದೆ. ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ತಲೆನೋವು ಸಹ ಉಂಟಾಗಬಹುದು.