ಆರೋಗ್ಯ ಇಲಾಖೆ ಚಾಲಕ ಪಿ. ಆನಂದ ನಿಧನ

Share this post :

ಮಡಿಕೇರಿ : ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿದ್ದ ಪಿ. ಆನಂದ(೫೨) ನಿಧನರಾಗಿದ್ದಾರೆ. ಸುಂಟಿಕೊಪ್ಪ(suntikoppa) ಟಿ.ಸಿ.ಎಲ್. ರಸ್ತೆಯ ನಿವಾಸಿ, ವರ್ತಕ ಪಳನಿ ಸ್ವಾಮಿ ಅವರ ಪುತ್ರರಾಗಿರುವ ಆನಂದ ಮಡಿಕೇರಿಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಮಡಿಕೇರಿಯ(madikeri) ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂತಿಮ ದರ್ಶನಕ್ಕಾಗಿ ಸುಂಟಿಕೊಪ್ಪದ ಸ್ವಗೃಹದಲ್ಲಿ ಇರಿಸಲಾಗಿದ್ದು, ಇಂದು ಸಂಜೆ ಸುಂಟಿಕೊಪ್ಪ ಹಿಂದೂ(hindu) ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

coorg buzz
coorg buzz