ಮಡಿಕೇರಿಯಲ್ಲಿ ಗುರುವಂದನಾ ಕಾರ್ಯಕ್ರಮ – ಯೋಗ ಶಿಕ್ಷಕರನ್ನು ಸನ್ಮಾನಿಸಿ ಗೌರವಾರ್ಪಣೆ..!

Share this post :

coorg buzz

ಮಡಿಕೇರಿ : ಗುರುಪೂರ್ಣಿಮೆ ಅಂಗವಾಗಿ ಮಡಿಕೇರಿಯ ಯೋಗ ಭಾರತಿ, ಯೋಗ ಸಂದ್ಯಾ, ಆರೋಹಣ ಕೊಡಗು, ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಗುರುವಂದನಾ ಕಾರ್ಯಕ್ರಮ ಶನಿವಾರ ನಡೆಯಿತು.
ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಗುರುವಿನ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂದಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.‌ ದಿನದ ಮಹತ್ವದ ಬಗ್ಗೆ ಅನಿತಾ ಸುಧಾಕರ್ ಮಾತನಾಡಿದರು.
ಯೋಗ ಶಿಕ್ಷಕರಾದ ಮಲ್ಲಿಗೆ ಪೈ, ಸರಿತಾ ವಿನೋದ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ಬೇರೆಡೆಗೆ ವರ್ಗವಾಗಿ ತೆರಳುತ್ತಿರುವ ತಂಡದ ಸದಸ್ಯರಾದ ಜ್ಯೋತಿ ದಿನೇಶ್, ಕವಿತಾ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ‌
ಇದೇ ವೇಳೆ ಯೋಗ ತಂಡದ ಸದಸ್ಯರು ಯೋಗ ಶಿಕ್ಷಕ ಕೆ.ಕೆ. ಮಹೇಶ್‌ ಕುಮಾರ್‌ ಅವನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.