ಮೈಸೂರು : ದಸರಾದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಸಿದ್ದಲಿಂಗಪುರದ ಕಾರ್ತಿಕ್ ಬಂಧಿತ ಆರೋಪಿ. ಅತ್ಯಾಚಾರ ಮಾಡಿ, ಕೊಲೆಗೈದು ಬಸ್‌ನಲ್ಲಿ ಕೊಳ್ಳೇಗಾಲಕ್ಕೆ ಎಸ್ಕೇಪ್ ಆಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಬಂಧಿಸಿ ಕರೆತರುವ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಈತ ಯತ್ನಿಸಿದ್ದು, ಪೊಲೀಸರು ಆತನ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಆತನ ವಿಚಾರಣೆ ಸಂದರ್ಭ ತಿಳಿಯಬೇಕಿದೆ.



