ಮಡಿಕೇರಿ ಏ.14 : ಬೆಂಗಳೂರಿನ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ನೀಡುವ “ಛಾಯಾ ಶ್ರೀ” (Chhaya shri) ಪ್ರಶಸ್ತಿಗೆ ಮಡಿಕೇರಿಯ ಜಿ.ಆರ್. ಗಿರೀಶ್ (G.R Girish) ಭಾಜನರಾಗಿದ್ದಾರೆ. ಗೌಳಿಬೀದಿ ನಿವಾಸಿಯಾಗಿರುವ ಗಿರೀಶ್, ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದು, ಛಾಯಾಗ್ರಾಹಕರ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಛಾಯಾಚಿತ್ರ ಕ್ಷೇತ್ರದಲ್ಲಿ ಗಿರೀಶ್ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾ ಗ್ರಾಹಕರ ಸಂಘದ “ಡಿಜಿ ಇಮೇಜ್ 2025″ರ ವಸ್ತು ಪ್ರದರ್ಶನದಲ್ಲಿ” “ಛಾಯಾ ಶ್ರೀ” ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.