ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಇನ್ನಿಲ್ಲ

Shivu Madappa

Share this post :

coorg buzz

ಮಾಜಿ ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷ ಕುಟ್ಟ ಗ್ರಾಮದ ನಿವಾಸಿ ಮುಕ್ಕಾಟೀರ ಶಿವು ಮಾದಪ್ಪ (49) ನಿಧನರಾಗಿದ್ದಾರೆ. ನೇರ ನುಡಿಯ ಒಬ್ಬ ನಾಯಕ, ಮಾಜಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹಾಲಿ ಕೆಪಿಸಿಸಿ ಸದಸ್ಯರಾಗಿದ್ದ ಶಿವು ಮಾದಪ್ಪ (Shivu Madappa) ಒಬ್ಬ ಅತ್ಯುತ್ತಮ ಸಂಘಟಗಾರರಾಗಿ, ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು.

ಮುಕ್ಕಾಟಿರ ಶಿವು ಮಾದಪ್ಪ ಭಾನುವಾರ ರಾತ್ರಿ 11:00 ಸಮಯದಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸೋಮವಾರ ಅವರ ಸ್ವಗ್ರಾಮದಲ್ಲಿ ಜರುಗಲಿದೆ. ಇವರ ಅಗಲಿಕೆಯು ಸಮಾಜಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವನ್ನುಂಟು ಮಾಡಿದ್ದು, ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಅವರ ಕುಟುಂಬ ವರ್ಗಕ್ಕೂ ಹಾಗೂ ಸಮಸ್ತ ಅಭಿಮಾನಿಗಳಿಗೆ ನೀಡಲಿ ಎಂದು ಶಾಸಕ ಎ ಎಸ್ ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಸಂತಾಪ ವ್ಯಕ್ತ ಪಡಿಸಿದ್ದಾರೆ.