ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣು ಕಾಡಾನೆ ಸಾವು

Share this post :

ಕುಶಾಲನಗರ : ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣಾನೆಯೊಂದು ಮೃತಪಟ್ಟ ಪ್ರಕರಣ ಮೀನುಕೊಲ್ಲಿ ಅರಣ್ಯದಲ್ಲಿ ವರದಿಯಾಗಿದೆ.
ವಾಲ್ನೂರು-ಮಾಲ್ದಾರೆ ನಡುವೆ ಹರಿಯುವ ಕಾವೇರಿ ನದಿಯಲ್ಲಿ ಸೆ.17ರಂದು ಆನೆಯ ಮೃತದೇಹ ಕಂಡುಬಂದಿತ್ತು. ನದಿಯ ಮಧ್ಯ ಭಾಗದಲ್ಲಿ ಮೃತದೇಹವಿದ್ದ ಕಾರಣ ನಿನ್ನೆ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಇಂದು ಬೋಟ್‌ ಹಾಗೂ ಸಾಕಾನೆಗಳ ನೆರವಿನಿಂದ ಆನೆಯ ಮೃತದೇಹವನ್ನು ನದಿಯಿಂದ ಹೊರತರಲಾಯಿತು.
ಮರಣೋತ್ತರ ಪರೀಕ್ಷೆ ವೇಳೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಇದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ಇಲಾಖೆಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

coorg buzz
coorg buzz