ಸೆಸ್ಕ್‌ ಸಹಾಯಕ ಇಂಜಿನಿಯರ್‌ ಎ.ಆರ್. ಸಂಪತ್‌ ಕುಮಾರ್‌ ಅವರಿಗೆ ಬೀಳ್ಕೊಡುಗೆ

Cesc Assistant Engineer

Share this post :

ಮಡಿಕೇರಿ : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಲ್ಲಿ (Cesc) ಸಹಾಯಕ ಇಂಜಿನಿಯ್‌ ಆಗಿದ್ದು ವರ್ಗಾವಣೆಯಾದ ಎ.ಆರ್.‌ ಸಂಪತ್‌ ಅವರಿಗೆ ಗ್ರೀನ್‌ ಸಿಟಿ ಫೋರಂ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು. 2015ರಿಂದ ಸುದೀರ್ಘ ಅವಧಿವರೆಗೆ ಸಹಾಯಕ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದ ಸಂಪತ್‌ ಅವರು ಸರ್ಕಾರದ ಆದೇಶದಂತೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕಚೇರಿಯಲ್ಲಿ ಭೇಟಿಯಾದ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಅವರು ಲೈನ್‌ಮನ್‌ಗಳ ಮೂಲಕ ಶಾಲು ಹೊಸಿದಿ ಫಲ ತಾಂಬೂಲ ನೀಡಿ ಗೌರವಿಸಿದರು.

ಸಂಪತ್‌ ಅವರ ಕಾರ್ಯನಿರ್ವಹಣೆಯ ಅವಧಿ ಸುಲಭದ್ದಾಗಿರಲಿಲ್ಲ. 2018ರ ನಂತರ ಪ್ರಕೃತಿ ವಿಕೋಪ, ಪ್ರವಾಹದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಹೆಚ್ಚು ಸಮಸ್ಯೆಯಾಗದ ರೀತಿ ಕಾರ್ಯ ನಿರ್ವಹಿಸಿದ್ದಾರೆ. ಕಠಿಣ ಸಂದರ್ಭದಲ್ಲಿ ತನ್ನ ಸಿಬ್ಬಂದಿಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಜನ ಮನ್ನಣೆ ಗಳಿಸಿದ್ದಾರೆಂದು ಸತ್ಯ ಗಣಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮಧ್ಯೆ ಸಂಪತ್‌ ಅವರು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಲಾಭಕ್ಕಾಗಿ ಸಮಯ ಕಳೆಯುವುದಕ್ಕಿಂತ ಸಾರ್ವಜನಿಕರ ಸೇವೆಗಾಗಿ ಸಮಯ ಮೀಸಲಿಟ್ಟು ಶ್ರಮಿಸಿದಂತೆ ಇವರ ಸೇವೆ ಇತರರಿಗೆ ಮಾದರಿಯಾಗಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ತನ್ನ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಸಂಪತ್‌ ಅವರು ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.