ಬೆಂಗಳೂರು( coorgbuzz.com ) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷ ಬಿಜೆಪಿ ಟೀಕೆ ಮಾಡುತ್ತಲೇ ಇದೆ. ಈಗ ಈ ಸಾಲಿಗೆ ಆಡಳಿತ ಪಕ್ಷದ ಶಾಸಕರು ಕೂಡಾ ಕೈಜೋಡಿಸಿದಂತಿದೆ. ಸ್ವಪಕ್ಷೀಯರಿಂದಲೇ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ. ದೇಶಪಾಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ತಮ್ಮದೇ ದಾಟಿಯಲ್ಲಿ ಯೋಜನೆಗಳನ್ನು ವ್ಯಂಗ್ಯವಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ದೇಶಪಾಂಡೆ, ಸರ್ಕಾರ ಜಾರಿಗೆ ತಂದಿರುವ ಯೋಜನೆ ಒಂದಾ ಎರಡಾ… ಉಚಿತ ಬಸ್‌ನಿಂದಾಗಿ ಮಹಿಳೆಯರೇ ಎಲ್ಲಿ ನೋಡಿದ್ರೂ ಕಾಣ್ತಾರೆ. ಸರ್ಕಾರಿ ಬಸ್‌ಗಳ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ. ನಾಲ್ಕು ಜನ ಗಂಡಸರು ಹೋಗೋದೇ ಕಷ್ಟ ಆಗಿದೆ. ಇಂಥ ಯೋಜನೆಗಳನ್ನ ಸಿದ್ದರಾಮಯ್ಯ ತಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
5 ಕೆಜಿ ಅಕ್ಕಿ ಬದಲು ತೊಗರಿ ಸೇರಿ ಕಿಟ್ ಕೊಡಲು ನಿರ್ಧಾರ ಮಾಡಿದ್ದಾರೆ. ನಾವು ಸಿಎಂ ಜೊತೆಗೆ ಇದ್ದವರು. ಈಗ ಏನೇನ್ ಮಾಡ್ತಾರೆ ಅಂತ ನಮ್ಗೇನೇ ಹೇಳೋದಿಲ್ಲ. ಎಣ್ಣೆ ಕೊಡ್ತಾರೋ, ಬೇಳೆ ಕೊಡ್ತಾರೋ, ಕಾಯಿ ಕೊಡ್ತಾರೋ ಅಂತ ಲೇವಡಿ ಮಾಡಿದ್ದಾರೆ.
ವಿಡಿಯೋ ನೋಡಿ…



