ಇಂಜಿನಿಯರಿಂಗ್ ಫಲಿತಾಂಶ ಪ್ರಕಟ – ಕುಶಾಲನಗರ ಕಾಲೇಜಿನ ವಿ‌.ಜೆ. ಜಾಯ್ಸ್ ಲೀನಾ ರಾಜ್ಯಕ್ಕೆ 2ನೇ ರ‍್ಯಾಂಕ್

Engineering

Share this post :

ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್‌ ವಿಭಾಗದ ವಿದ್ಯಾರ್ಥಿನಿ ವಿ ಜೆ ಜಾಯ್ಸ್ ಲೀನಾ 2024- 25ನೇ ಶೈಕ್ಷಣಿಕ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಕೊಡಗು ಜಿಲ್ಲೆಯ ಏಕೈಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇದೇ ಪ್ರಥಮ ಬಾರಿಗೆ ಈ ಗೌರವಕ್ಕೆ ಭಾಜನವಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದ್ದು ರ‍್ಯಾಂಕ್ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬೆಳಗಾಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ 25ನೇ ಘಟಿಕೋತ್ಸವದಲ್ಲಿ ಜಾಯ್ಸ್ ಲೀನಾ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಜಾಯ್ಸ್ ಲೀನಾ ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆಯ ಆಟೋ ಚಾಲಕ ಜೋಸೆಫ್ ವಂದನಾಥ್ ಮತ್ತು ಜೋಸೆಫಿನ್ ದಂಪತಿಗಳ ಪುತ್ರಿ. ಜಾಯ್ಸ್ ಲೀನಾ ಕುಶಾಲನಗರ ಫಾತಿಮಾ ಕಾನ್ವೆಂಟ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ, ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮಾಡಿ ನಂತರ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

 

coorg buzz
coorg buzz