ಕೊಡಗಿನಲ್ಲಿ ತಮ್ಮನಿಗೆ ಗುಂಡಿಟ್ಟು ಕೊಂದ ಅಣ್ಣ: ಕಾರಣ ಏನು ಗೊತ್ತಾ?

kodagu

Share this post :

coorg buzz

ಅಣ್ಣ-ತಮ್ಮನ ನಡುವೆ ಆಸ್ತಿಗಾಗಿ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಚೆಟ್ಟಳ್ಳಿ ಬಳಿಯ ಅಭ್ಯತ್ ಮಂಗಲದಲ್ಲಿ ನಡೆದಿದೆ. ಕೊಳಂಬೆ(Kolambe) ವಿನು ಬೆಳ್ಯಪ್ಪ(53) ಮೃತ ದುರ್ದೈವಿ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು, ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಸಹೋದರ ಮಣಿ ಹಿಂದಿನಿಂದ ಬಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಇಂದು ಬೆಳಿಗ್ಗೆ 11:45 ರ ಸುಮಾರಿಗೆ ಸುಬ್ಬಯ್ಯ ತನ್ನ ಮನೆಯಿಂದ ತನ್ನ SBBL ಬಂದೂಕನ್ನು ತೆಗೆದುಕೊಂಡು ತನ್ನ ಕಿರಿಯ ಸಹೋದರನನ್ನು ಕೊಲೆ ಮಾಡಿದ್ದಾನೆ. ಅಣ್ಣ-ತಮ್ಮನ ನಡುವೆ ಹಲವು ದಿನಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಘಟನೆ ಸಂಬಂಧಿಸಿದಂತೆ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಡಗು ಎಸ್‌ಪಿ ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿ ಸುಬ್ಬಯ್ಯನನ್ನು ಬಂಧಿಸಲಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.